ಸುಳ್ಯ ತಾಲೂಕಿನಲ್ಲಿ ಆ.1ರಂದು ಸುರಿದ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಜನರು ಸಮಸ್ಯೆಗೊಳಗಾದ ಘಟನೆ ವರದಿಯಾಗಿದೆ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ 275ಕ್ಕೆ ಪಾಲಡ್ಕ ಸಮೀಪ ಭಾರೀ ಮಳೆಗೆ ಪಯಸ್ಬಿನಿ ನದಿ ಉಕ್ಕಿ ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಅಲ್ಲದೆ ಪೆರಾಜೆಯ ಕಲ್ಚೆರ್ಪೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟಾಯಿತು.ಇದಲ್ಲದೆ ಅಲ್ಲಲ್ಲಿ ಮಳೆ ಹಾನಿ ಉಂಟಾದ ಘಟನೆ ವರದಿಯಾಗಿದೆ.
ಸಂಪಾಜೆ ಗ್ರಾಮದ ದಂಡೆಕಜೆ ನಿವಾಸಿ ಹರ್ಷಿತ್ ಜಿ.ಜಿ ಅವರ ಮನೆಯ ಗೋಡೆ ಕುಸಿದು ಶೀಟ್ ಗಳು ಹಾನಿಯಾಗಿದೆ, ಚೌಕಿ ನಿವಾಸಿ ಶೀಲಾವತಿ ಅವರ ಮನೆಯ ಸುತ್ತ ಹೊಳೆ ನೀರು ಆವರಿಸಿದೆ. ಹಾಗೂ ಕಲ್ಲುಗುಂಡಿ ಕೀಲಾರು, ಗೂನಡ್ಕ, ಸೇರಿದಂತೆ ವಿವಿಧ ವ್ಯಾಪ್ತಿಯಲ್ಲಿ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಕಿರು ಸೇತುವೆ ಮುಳುಗಡೆಯಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಹಾಗೂ ಹೊಳೆಯ ನೀರಿನ ಮಟ್ಟ ಏರಿಕೆಯಾಗಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪಂಚಾಯತ್ ಪ್ರಕಟಣೆ ತಿಳಿಸಿದ್ದಾರೆ.
ಪಾಲಡ್ಕ : ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಉಕ್ಕಿ ಹರಿದ ಪಯಸ್ವಿನಿ ನದಿ!





































































