ಕೊರಗ ಸಮುದಾಯ ಸಬಲೀಕರಣಕ್ಕೆ ಉತ್ತೇಜನ: ಸಮುದಾಯಕ್ಕೆ ಸೀಲಿಂಗ್ ಯಂತ್ರ ವಿತರಣೆ

ಸುಳ್ಯ, ಮಾ.28: ಅರಂತೋಡು ಗ್ರಾಮದ ಪ್ರಕೃತಿ ವನ್ ಧನ್ ವಿಕಾಸ್ ಕೇಂದ್ರದ ಮೂಲಕ ಆದಿವಾಸಿ ಸಮುದಾಯಗಳ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಿ ₹41,000 ಮೌಲ್ಯದ ಸೀಲಿಂಗ್ ಯಂತ್ರವನ್ನು ವಿಶೇಷವಾಗಿ ದುರ್ಬಲ ಆದಿವಾಸಿ ಗುಂಪಾದ ಕೊರಗ ಸಮುದಾಯಕ್ಕೆ ವಿತರಿಸಲಾಯಿತು.
ಕೇಂದ್ರ ಸರ್ಕಾರದ ಗಿರಿಜನ ವ್ಯವಹಾರಗಳ ಸಚಿವಾಲಯದ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಅರಣ್ಯ ಸಂಪನ್ಮೂಲಗಳ ಸತತ ಬಳಕೆಯ ಮೂಲಕ ಆದಾಯ ಹೆಚ್ಚಿಸುವುದನ್ನು ಉದ್ದೇಶಿಸಿದೆ. ಸೀಲಿಂಗ್ ಯಂತ್ರದ ಸಹಾಯದಿಂದ ಉತ್ಪನ್ನಗಳ ಪ್ಯಾಕೇಜಿಂಗ್ ಸುಧಾರಿಸಿ, ಮಾರುಕಟ್ಟೆ ಮೌಲ್ಯ ಹೆಚ್ಚಿಸುವಲ್ಲಿ ನೆರವಾಗಲಿದೆ.
ಈ ನೆರವು ಐಸಿಎಆರ್-ಡಿಸಿಆರ್, ಪುತ್ತೂರು ಸಂಸ್ಥೆಯ ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಅಶ್ವಥಿ ಚಂದ್ರಶೇಖರ್ (ಕೃಷಿ ವಿಸ್ತರಣೆ), ಅವರ ಪ್ರಯತ್ನದಿಂದ ಲಭ್ಯವಾಯಿತು. ಕಾರ್ಯಕ್ರಮದಲ್ಲಿ ಐಸಿಎಆರ್-ಅಟಾರಿ ಬೆಂಗಳೂರು ನಿರ್ದೇಶಕ ಡಾ. ವೆಂಕಟ ಸುಬ್ರಹ್ಮಣ್ಯನ್ ಸೀಲಿಂಗ್ ಮೆಷೀನ್ ಕೊರಗ ಸಮುದಾಯದವರಿಗೆ ವಿತರಿಸಿದರು.
ಡಾ. ರಾಯುಡು ಪ್ರಧಾನ ವಿಜ್ಞಾನಿ (ಕೃಷಿ ವಿಸ್ತರಣೆ), ಎನ್ ಆರ್ ಎಲ್ ಎಂ ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ತಾಲೂಕು ವ್ಯವಸ್ಥಾಪಕರು ಮೇರಿ ಎಸ್, ವಲಯ ಮೇಲ್ವಿಚಾರಕ ಅವಿನಾಶ್ ಡೆಲ್ಲಾರಿಯೊ,ಬಿ.ಆರ್ .ಪಿ
ಪಿ. ಆರ್ .ಐ ಜಯಲಕ್ಷ್ಮೀ ಹಾಗೂ ಸಂಜೀವಿನಿ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ)ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು
ಐ ಸಿ ಎ ಆರ್-ಕೆವಿಕೆ ದಕ್ಷಿಣ ಕನ್ನಡದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಜೆ. ರಮೇಶ ಅವರ ಮಾರ್ಗದರ್ಶನದಲ್ಲಿ ಸಂಯೋಜಿಸಲಾಯಿತು. ಒಟ್ಟು 30 ವಿ ಡಿ ವಿ ಕೆ ಸದಸ್ಯರು ಹಾಗೂ ಕೊರಗ ಸಮುದಾಯದ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ.



































































































Leave a Comment

Your email address will not be published. Required fields are marked *

error: Content is protected !!
Scroll to Top