ಅರಂತೋಡು, ಆ. 16 : ಅರಂತೋಡು ಅನ್ವರುಲ್ ಹುದಾ ಯೆಂಗಮೆನ್ಸ್ ಯೆಸೋಷಿಯೇಷನ್ ಇದರ ಸುವರ್ಣ ಮಹೋತ್ಸವ ಆಚರಣಾ ವರ್ಷದ ಅಂಗವಾಗಿ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಸುಮಾರು 25ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ ಕೈ ತೊಳೆಯುವ ಘಟಕ ವನ್ನು ನಿವೃತ್ತ ಶಿಕ್ಷಕಿ ಗಂಗಮ್ಮ ಟೀಚರ್ ಲೋಕಾರ್ಪಣೆ ಗೊಳಿಸಿದರು ಪ್ರಾಸ್ತವಿಕ ಮಾತುಗಳನ್ನಾಡಿದ ಮುಖ್ಯಪಾಧ್ಯಾಯ ಗೋಪಾಲಕೃಷ್ಣ ಬನ ಮಾತನಾಡಿದರು.
ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಚೇತನಾ ಪಾರೇಮಜಲು, ಅಸೋಷಿಯೇಷನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ ಪಸಿಲು, ಕೋಶಾಧಿಕಾರಿ ಸಂಶುದ್ದಿನ್ ಪೆಲ್ತಡ್ಕ,, ಕೆ ಡಿ ಪಿ ಸದಸ್ಯ ಅಶ್ರಫ್ ಗುಂಡಿ, ಕೆ ಎಂ ಮೂಸಾನ್, ಬದ್ರುದ್ದಿನ್ ಪಟೇಲ್, ಸಂನ್ಸು ಕ್ಯೂರ್, ತಾಜುದ್ದಿನ್ ಅರಂತೋಡು, ಹಿರಿಯ ವಿದ್ಯಾರ್ಥಿಸಂಘ ಅಧ್ಯಕ್ಷ ಸತೀಶ್ ನಾಯ್ಕ್,ಕಾರ್ಯದರ್ಶಿ ಲೋಹಿತಾಕ್ಷ ಕಲ್ಲಗದ್ದೆ, ಪ್ರವೀಣ್ ಎಲ್ಪಕಜೆ, ಜನಾರ್ಧನ್ ಇರ್ನೆ, ಬಾಲಕೃಷ್ಣ ರೈ, ಶಿಕ್ಷಕಿಯಾರದ ಭಾನುಮತಿ, ರೇಷ್ಮಾ, ರೇಣುಕಾ, ಅನಿತಾ, ಶಕುಂತಲಾ, ಗೀತಾ, ಮಂಗಳ, ಬುಶ್ರ, ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು ದೈಹಿಕ ಶಿಕ್ಷಕ ಅಧ್ಯಾಪಕ ಧನಂಜಯ ಮೆರ್ಕಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಅರಂತೋಡು ಅನ್ವರುಲ್ ಹುದಾ ವತಿಯಿಂದ ಸರಕಾರಿ ಹಿ, ಪ್ರಾಥಮಿಕ ಶಾಲೆ ಗೆ ಕೈ ತೊಳೆಯುವ ಘಟಕ ಕೊಡುಗೆ
















