ಕಾಡಾನೆ ಓಡಿಸಲು ಗಾಳಿಯಲ್ಲಿ ಹಾರಿಸಿದ ಗುಂಡು ಸ್ಕೂಟರ್ ಸವಾರನಿಗೆ ತಗುಲಿ ಗಾಯ

ಸುಳ್ಯ ಬೇಂಗಮಲೆ ರಸ್ತೆ ಪಕ್ಕ ಕಾಡಾನೆ ಓಡಿಸಲು ಅರಣ್ಯ ಇಲಾಖೆಯವರು ಗಾಳಿಯಲ್ಲಿ ಹಾರಿಸಿದ ಗುಂಡು ಸ್ಕೂಟರ್ ಸವಾರರೊಬ್ಬರ ಕಾಲಿಗೆ ತಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಪೆರುವಾಜೆ ಗ್ರಾಮದ ಏನಡ್ಕ ರಾಘವ ಪ್ರಭು ಎಂಬವರು ಗುಂಡು ತಗುಲಿ ಗಾಯಗೊಂಡ ವ್ಯಕ್ತಿ.
ಕಲ್ಲುಗುಂಡಿಯ ಕೆನರಾ ಬ್ಯಾಂಕ್ ಉದ್ಯೋಗಿಯಾದ ಅವರು ಆ.12 ರಂದು ಸಂಜೆ ಕೆಲಸ ಮುಗಿಸಿ ಸಂಪಾಜೆಯಿಂದ ಸಂಜೆ ಪೆರುವಾಜೆಯ ಮನೆಗೆ ಹೋಗುತ್ತಿದ್ದಾಗ ಐವರ್ನಾಡು ಗ್ರಾಮದ ಬೇಂಗಮಲೆ ಎಂಬಲ್ಲಿ ಕಾಡಾನೆಗಳು ಇದ್ದವು ಎನ್ನಲಾಗಿದೆ.
ಆನೆ ರಸ್ತೆ ದಾಟುತ್ತಿರುವುದನ್ನು ನೋಡಿ, ಸ್ಕೂಟಿಯನ್ನು ಅವರು ತಿರುಗಿಸಿದರು.
ಆ ಹೊತ್ತಿಗೆ ಆನೆಯನ್ನು ಕಾಡಿನೊಳಕ್ಕೆ ಓಡಿಸಲು ಪ್ರಯತ್ನಿಸುತ್ತಿದ್ದ ಅರಣ್ಯ ಇಲಾಖೆಯವರು ಆನೆ ಓಡಿಸಲು ಕೋವಿಯಿಂದ ಫೈರಿಂಗ್ ಮಾಡಿದರೆನ್ನಲಾಗಿದೆ.ಆ ಗುಂಡಿನ ಒಂದು ಚಿಲ್ ಸುಳ್ಯದತ್ತ ಸ್ಕೂಟಿ ತಿರುಗಿಸುತ್ತಿದ್ದ ರಾಘವರ ಎಡಕಾಲಿಗೆ ತಾಗಿತೆಂದು ಹೇಳಲಾಗುತ್ತಿದೆ. ಗಾಯಗೊಂಡ ರಾಘವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆ.14 ರಂದು ಸರ್ಜರಿಯಾಗಿದ್ದು, ಗಾಯದೊಳಗಿದ್ದ ಚಿಲ್ಲನ್ನು ಹೊರತೆಗೆದಿದ್ದಾರೆ.

























Leave a Comment

Your email address will not be published. Required fields are marked *

error: Content is protected !!
Scroll to Top