ಮಂಗಳೂರು ಮಾಸ್ ಲಿಮಿಟೆಡ್ ನ ನೂತನ ಸಿಇಒ ಆಗಿ ಭರತ್ ಕುಮಾರ್ ಬಳ್ಳಕ ಅಧಿಕಾರ ಸ್ವೀಕಾರ

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಮಾಸ್ ಲಿಮಿಟೆಡ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಭರತ್ ಕುಮಾರ್ ಬಳ್ಳಕ ಎ. 1ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಇದುವರೆಗೆ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಟಿ. ಮಹಾಬಲೇಶ್ವರ ಭಟ್ ರವರು ಎ. 30 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಭರತ್ ಕುಮಾರ್ ರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ನೀಡಲಾಗಿದೆ. ಹಣಕಾಸು ಮತ್ತು ಮಾರುಕಟ್ಟೆ ನಿರ್ವಹಣೆ (Finance and Marketing) ವಿಷಯದಲ್ಲಿ ಎಂ.ಬಿ.ಎ ಪದವಿ ಪಡೆದಿರುವ ಇವರು ಈ ಹಿಂದೆ ಅಮೆರಿಕ ಮೂಲದ ಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಕಳೆದ ಜುಲೈ ತಿಂಗಳಲ್ಲಿ ಮಾಸ್ ಲಿಮಿಟೆಡ್‌ಗೆ ಸಿಇಒ ತರಬೇತಿ (CEO Trainee)ಯಾಗಿ ನೇಮಕಗೊಂಡಿದ್ದರು.
ಸಂಸ್ಥೆಯ ಬೆಳವಣಿಗೆಗೆ ಹೊಸ ಆಯಾಮ ನೀಡುವ ಉದ್ದೇಶದೊಂದಿಗೆ ಭರತ್ ಕುಮಾರ್ ಬಳ್ಳಕ ಅವರು ಈಗ ಅಧಿಕೃತವಾಗಿ ಜವಾಬ್ದಾರಿಯನ್ನು ವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಮೂಲತಃ ಗುತ್ತಿಗಾರು ಗ್ರಾಮದ ಬಳ್ಳಕ್ಕ ವೀರಪ್ಪ ನಾಯ್ಕ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರರಾಗಿರುವ ಭರತ್ ಕುಮಾರ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೂತ್ಕುಂಜ ಸ.ಹಿ.ಪ್ರಾ. ಶಾಲೆ ಮತ್ತು ಕೆ. ಎಸ್. ಗೌಡ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣ ಮತ್ತು ಪ.ಪೂರ್ವ ಶಿಕ್ಷಣವನ್ನು ನಿಂತಿಕಲ್ಲು ಕೆ.ಎಸ್. ಗೌಡ ವಿದ್ಯಾಸಂಸ್ಥೆ, ಬಿ.ಕಾಂ ಪದವಿಯನ್ನು ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಮುಗಿಸಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ನಲ್ಲಿ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪಡೆದಿದ್ದರು. ಇವರ ಸಹೋದರಿ ಕು. ಭಾವನಾ ಬಳ್ಳಕ್ಕ ಅಂಚೆ ಇಲಾಖೆ ಕರೋಪ್ಪಾಡಿ ಶಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.





















































































Leave a Comment

Your email address will not be published. Required fields are marked *

error: Content is protected !!
Scroll to Top