ಭಾಗಮಂಡಲದ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ ಕುಂದಲ್ಪಾಡಿಯವರು ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿ (ಇಂದು)ಎ.30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಪೆರಾಜೆ ಗ್ರಾಮದ ಕುಂದಲ್ಪಾಡಿ ಜತ್ತಪ್ಪ ಹಾಗೂ ಬೊಮ್ಮಕ್ಕರ ಸುಪುತ್ರರಾಗಿ ದಿನಾಂಕ 18-04-1966ರಂದು ಜನಿಸಿದ್ದಾರೆ. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಪುತ್ಯ ಇಲ್ಲಿ ಮುಗಿಸಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಳಚೇರಿ ಯಲ್ಲಿ ವ್ಯಾಸಂಗ ಮಾಡಿ ಪ್ರೌಢಶಾಲಾ ಶಿಕ್ಷಣವನ್ನು ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಪಾಜೆ ಇಲ್ಲಿ ಅಭ್ಯಾಸ ಮಾಡಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಪೂರೈಸಿ, ಉನ್ನತ ವ್ಯಾಸಂಗವಾದ ಎಂ.ಎ ಪದವಿ ಯನ್ನು ಮಂಗಳ ಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿ 02-07-1990 ರಲ್ಲಿ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಕಾಲೇಜು ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ 01-06-1992 ರಲ್ಲಿ ಖಾಯಂ ನೆಲೆಯಲ್ಲಿ ನೇಮಕಗೊಂಡರು.ನಂತರ 1998 ರ ಏಪ್ರಿಲ್ 20ನೇ ತಾರೀಖಿನಂದು ಸುಳ್ಯ ತಾಲ್ಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಮಾಣಿಬೆಟ್ಟು ಮನೆಯ ಪುಟ್ಟಣ್ಣ ಗೌಡ ಮತ್ತು ಲೀಲಾವತಿಯ ಪುತ್ರಿಯಾದ ವೀಣಾ ಎಂ ಪಿ ಇವರನ್ನು ವಿವಾಹವಾದರು. ಮುಂದೆ ಅಮೃತ ದಿವಾಕರ್ ಎಂಬ ಪುತ್ರಿಯನ್ನು ಮತ್ತು ಅನಿರುಧ್ ದಿವಾಕರ್ ಎಂಬ ಪುತ್ರನನ್ನು ಪಡೆದರು. ಡಾ.ಅಮೃತ ದಿವಾಕರ್ ಇವರು ಎಂ ಬಿ ಬಿ ಎಸ್ ಪದವಿ ಮುಗಿಸಿ ಪ್ರಸ್ತುತ ದಾವಣಗೆರೆಯ ಮೆಡಿಕಲ್ ಕಾಲೇಜಿನಲ್ಲಿ ಎಂ ಎಸ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಇವರ ಪುತ್ರ ಅನಿರುಧ್ ದಿವಾಕರ್ ಇವರು ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಪಡೆದು ವೃತ್ತಿಯಲ್ಲಿ ನಿರತರಾಗಿದ್ದಾರೆ.ದಿನಾಂಕ 01-05-2021 ರಿಂದ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ್ದಾರೆ. ಕೇವಲ ಶೈಕ್ಷಣಿಕವಾಗಿ ಅಲ್ಲದೆ 2010 ರಿಂದ ಈಚೆಗೆ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದ ಚುನಾವಣಾ ತರಬೇತುದಾರರಾಗಿ ಕಾರ್ಯ ನಿರ್ವಾಹಣೆಯನ್ನು ಮಾಡುತ್ತಾ ಬಂದಿದ್ದಾರೆ.2014 ಮತ್ತು 2018ರಲ್ಲಿ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪಠ್ಯ ಪುಸ್ತಕ ರಚನಾಸಮಿತಿಯಲ್ಲಿಯ ಸದಸ್ಯರಾಗಿಯೂ ಕಾರ್ಯ ನಿರ್ವಾಹಣೆತೋರಿದ್ದಾರೆ. ಭಾಗಮಂಡಲ ಮತ್ತು ನೆರೆ ಹೊರೆಯ ಸಂಘ ಸಂಸ್ಥೆಗಳ ರಚತ ಮಹೋತ್ಸವ ಸುವರ್ಣ ಮಹೋತ್ಸವ, ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಸಂಪಾದಕರಾಗಿ, ಉಪಸಂಪಾದಕರಾಗಿ ಸೇವೆ ಸಲ್ಲಿಸಿರುತ್ತೀರಿ.ಈವರ ಸೇವೆಯನ್ನು ಗುರುತಿಸಿದ ಕೊಡಗಿನ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿವೆ. ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ ನಿಂದ ಉತ್ತಮ ಉಪನ್ಯಾಸಕ ಪ್ರಶಸ್ತಿ, ರೋಟರಿ ವುಡ್ಸ್ ಮಡಿಕೇರಿ ಇವರ ವತಿಯಿಂದ “ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.1990 ರಿಂದ ಇಲ್ಲಿಯವರೆಗೆ 36 ವರ್ಷಗಳ ಕಾಲ ಅವಿರತವಾಗಿ ಪ್ರಾಮಾಣಿಕತೆ ನಿಸ್ಪೃಹತೆಯಿಂದ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.
ಭಾಗಮಂಡಲದ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ ಕುಂದಲ್ಪಾಡಿಯವರು ಸೇವೆಯಿಂದ ನಿವೃತ್ತಿ



















































