ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಸೇತುವೆ ಕಾಮಗಾರಿಗಳಿಗೆ 5.ಕೋಟಿ ಅನುದಾನ ಬಿಡುಗಡೆ : ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ ಮತ್ತು ಕಡಬ ತಾಲ್ಲೂಕಿನ ಜಿಲ್ಲಾಪಂಚಾಯತ್ ಮುಖ್ಯ ರಸ್ತೆ ಮತ್ತು ಲೊಕೋಪಯೋಗಿ ರಸ್ತೆಗಳಲ್ಲಿ ಶಿಥೀಲಗೊಂಡಿರುವ 5 ಸೇತುವೆಗಳಿಗೆ 5ಕೋಟಿ ರೂ
ಅನುದಾನ ಬಿಡುಗಡೆಗೊಂಡಿದೆ‌ ಎಂದು ಶಾಸಕಿ ಭಾಗೀರಥಿ ಮುರುಳ್ಯ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.































































































  1. ಪದಕ ಎಂಬಲ್ಲಿ ಸೇತುವೆ ನಿರ್ಮಾಣ: ಸುಳ್ಯ ತಾಲ್ಲೂಕು ನಡುಗಲ್ಲು-ಹರಿಹರ-ಪಲ್ಲತಡ್ಕ ಬಾಳುಗೋಡು ರಸ್ತೆಯ ಕಿ.ಮೀ 10.75 ರಲ್ಲಿ ಪದಕ ಎಂಬಲ್ಲಿ ಸೇತುವೆ ನಿರ್ಮಾಣ ಒಂದು ಕೋಟಿ ಎಪ್ಪತ್ತೈದು ಲಕ್ಷ ರೂಪಾಯಿಗಳು (₹175.00 ಲಕ್ಷ).
  2. ಮೆಟ್ಟಿನಡ್ಕ ಎಂಬಲ್ಲಿ ಸೇತುವೆ ನಿರ್ಮಾಣ: ಸುಳ್ಯ ತಾಲ್ಲೂಕು ಮಡಪ್ಪಾಡಿ ಗ್ರಾಮದ ಸೇವಾಜೆ ಮದಪ್ಪಾಡಿ-ಕಂದಪ್ಪಾಡಿ-ಗುತ್ತಿಗಾರು ರಸ್ತೆಯ ಕಿ.ಮೀ 11.70 ರ ಮೆಟ್ಟಿನಡ್ಕ ಎಂಬಲ್ಲಿ ಸೇತುವೆ ನಿರ್ಮಾಣ – ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳು (₹150.00 ಲಕ್ಷ).
  3. ತೋಟಂಪಾಡಿ ಎಂಬಲ್ಲಿ ಸೇತುವೆ ನಿರ್ಮಾಣ: ಸುಳ್ಯ ತಾಲ್ಲೂಕು ಮಂಡೆಕೋಲು ಗ್ರಾಮದ ಸುಳ್ಯ-ಕಾಂತಮಂಗಲ-ಅಜ್ಜಾವರ-ಮಂಡೆಕೋಲು-ಕನ್ಯಾನ ರಸ್ತೆಯ ಕಿ.ಮೀ 8.50 ರಲ್ಲಿ ತೋಟಂಪ್ಪಾಡಿ ಎಂಬಲ್ಲಿ ಸೇತುವೆ ನಿರ್ಮಾಣ – ಅರವತ್ತು ಲಕ್ಷ ರೂಪಾಯಿಗಳು (₹60.00 ಲಕ್ಷ).
  4. ಹೊಸ ಕಿರು ಸೇತುವೆ ನಿರ್ಮಾಣ: ಸುಳ್ಯ ತಾಲ್ಲೂಕು ಪುಳಿಕುಕ್ಕು-ಎಡಮಂಗಲ-ಅಲೆಕ್ಕಾಡಿ ರಸ್ತೆಯ ಕಿ.ಮೀ 2.50 ರಲ್ಲಿ ಡೆಕ್ಕಳ ಎಂಬಲ್ಲಿ ಸೇತುವೆ ನಿರ್ಮಾಣ (ಹಾನಿಗೊಳಗಾದ ಕಿರಿದಾದ ಸೇತುವೆ ಬದಲಿಗೆ) – ಇಪ್ಪತ್ತೈದು ಲಕ್ಷ ರೂಪಾಯಿಗಳು (₹25.00 ಲಕ್ಷ).
  5. ಹೊಸ ಕಿರು ಸೇತುವೆ ನಿರ್ಮಾಣ: ಸುಳ್ಯ ತಾಲ್ಲೂಕು ಪೈಚಾರು-ಬೆಳ್ಳಾರೆ-ಸವಣೂರು-ಕುದ್ಮಾರು-ಅಲಂಕಾರು-ಸುಬ್ರಹ್ಮಣ್ಯ ರಸ್ತೆಯ ಕಿ.ಮೀ 3.50 ರಲ್ಲಿ (ಹಾನಿಗೊಳಗಾದ ಕಿರಿದಾದ ಸೇತುವೆ ಬದಲಿಗೆ) – ತೊಂಬತ್ತು ಲಕ್ಷ ರೂಪಾಯಿಗಳು (₹90.00 ಲಕ್ಷ).ಒಟ್ಟು ಮೊತ್ತ ಐದು ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು‌ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top