ನಿರಂತರ ಚಟುವಟಿಕೆಗಳಿಂದ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಮಂಡೆಕೋಲು ಗ್ರಾಮಪಂಚಾಯತ್ ಗ್ರಂಥಾಲಯದಲ್ಲಿ 1೦ ದಿನಗಳ ಬೇಸಿಗೆ ಶಿಬಿರ *ಗ್ರಂಥಾಲಯದ ಅಂಗಳದಲ್ಲಿ ಮಕ್ಕಳ ಜ್ಞಾನಹಬ್ಬ* ಆರಂಭಗೊಂಡಿದೆ.
ಶಿಬಿರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಾಜಿ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಮಂಡಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ, ಸಂಪನ್ಮೂಲ ವ್ಯಕ್ತಿಯಾದ ರಂಗ ಕಲಾವಿದ ಸುಬ್ಬು ಸಂಟ್ಯಾರ್, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಉಪಸ್ಥಿತರಿದ್ದರು.
ಆರಂಭದ ದಿನ ರಂಗ ಕಲಾವಿದ ಸುಬ್ಬು ಸೆಂಟ್ಯಾರ್, ಹಾಗೂ ಬಳ್ಳಾರಿಯಲ್ಲಿ ಶಿಕ್ಷಕರಾಗಿರುವ ಸುಬ್ರಹ್ಮಣ್ಯ ಮಾವಂಜಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಿಸಿದ್ದರು. ಶಿಬಿರವು ಮೇ 10ರಿಂದ ಮೇ 19ರ ತನಕ ನಡೆಯಲಿದ್ದು ಮಕ್ಕಳಿಗೆ ಸಂಸ್ಕಾರ ಪಾಠ, ಹಾಡು, ನೃತ್ಯ, ರಂಗಕಲೆಗಳು, ಗ್ರಾಮೀಣ ಆಟಗಳು, ಚೆಸ್, ಆರ್ಟ್, ಕ್ರಾಫ್ಟ್, ಹೊರಸಂಚಾರಗಳ ಸಹಿತ ಹತ್ತು ದಿನಗಳ ಶಿಬಿರದಲ್ಲಿ ಮಕ್ಕಳ ಜ್ಞಾನ ವೃದ್ಧಿಸುವ ಮನಸ್ಸಿಗೆ ಮುದನೀಡುವ ವಿವಿಧ ಚಟುವಟಿಕೆಗಳು ನಡೆಯಲಿವೆ. ಎಲ್ಲಾ ದಿನಗಳಲ್ಲಿ ವಿಭಿನ್ನ ಕ್ಷೇತ್ರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಪ್ರತಿದಿನದ ಕಾರ್ಯಕ್ರಮವನ್ನು ಗಣ್ಯವ್ಯಕ್ತಿಗಳು ಉದ್ಘಾಟಿಸಲಿದ್ದಾರೆ.
ಕು.ಕುಶಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾ.ತಶ್ವಿತ್ ಕನ್ಯಾನ ಸ್ವಾಗತಿಸಿ, ಮಾ.ಸೂರ್ಯತೇಜ ವಂದಿಸಿದರು. ಕಾರ್ಯಕ್ರಮದ ಆಯೋಜಕರಾದ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಪ್ರಾಸ್ತಾವಿಕ ಮಾತನ್ನಾಡಿದರು. ಕು.ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು
ಮಂಡೆಕೋಲು ಗ್ರಂಥಾಲಯದಲ್ಲಿ 1೦ ದಿನಗಳ ಬೇಸಿಗೆ ಶಿಬಿರ “ಮಕ್ಕಳ ಜ್ಞಾನಹಬ್ಬ” ಆರಂಭ





















































