ಬಹು ವರ್ಷಗಳ ಬೇಡಿಕೆಯಾದ ಅರಂತೋಡು ಸಮೀಪದ
ಅರಮನೆಗಯ ಬಲ್ನಾಡ್ ಹೊಳೆಗೆ ಶಾಸಕರ ಅನುಮೋದನೆಯಿಂದ ರಾಜ್ಯ ಸರ್ಕಾರದ ವಿಪತ್ತು ಸಂಚಯನ ನಿಧಿಯಿಂದ (SDMF) ಅನುದಾನದಿಂದ ನಿರ್ಮಾಣವಾದ ನೂತನ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಮೇ.17ರಂದು ನಡೆಯಲಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷ ದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಮೇ 17ಕ್ಕೆ ಅರಮನೆಗಯ ಬಲ್ನಾಡ್ ಹೊಳೆಗೆ ನಿರ್ಮಾಣವಾದ ನೂತನ ಸೇತುವೆ ಶಾಸಕರಿಂದ ಉದ್ಘಾಟನೆ













