ಮಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ದಕ್ಷಿಣ ಕನ್ನಡ, ಕೊಡಗು , ಮೈಸೂರು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಹಕಾರಿ ಕ್ಷೇತ್ರದ ಮುಂಚೂಣಿ ಸಂಸ್ಥೆಯಾದ ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 17.05.2026 ನೇ ಆದಿತ್ಯವಾರದಂದು ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಿ ಆರ್ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಹಲವಾರು ಪ್ರಥಮಗಳನ್ನು ನೀಡಿ ಮಾದರಿಯಾದ ಸಂಸ್ಥೆಯು ಪ್ರಸ್ತುತ 8 ಶಾಖೆಗಳನ್ನು ಹೊಂದಿದ್ದು 2025-26 ನೇ ಸಾಲಿನ ಆರ್ಥಿಕ ವರ್ಷದಲ್ಲಿ 100 ಕೋಟಿ ವ್ಯವಹಾರ ನಡೆಸಿದ್ದು 8,169 ಸದಸ್ಯರನ್ನು ಹೊಂದಿ 1.82 ಕೋಟಿ ಪಾಲು ಬಂಡವಾಳವನ್ನು , 45 ಕೋಟಿ ಠೇವಣಿ, 35 ಕೋಟಿ ಭದ್ರತಾ ಸಾಲ , 2 ಕೋಟಿ ಮೀಸಲು ನಿಧಿಗಳನ್ನು , 45 ಕೋಟಿ ಕಾರ್ಯನಿರತ ಬಂಡವಾಳವನ್ನು ಹೊಂದಿ ರೂ. 63.61 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರುಗಳಿಗೆ ಶೇ. 10 % ಡಿವಿಡೆಂಡ್ ಘೋಷಣೆ ಮಾಡಿದರು. ಸಂಘವು ಸ್ವಂತ ನಿವೇಶನ ಹೊಂದಿದ್ದು ಮುಂದಿನ 2 ವರ್ಷಗಳೊಳಗೆ ಸ್ವಂತ ಆಡಳಿತ ಕಛೇರಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು. ಸದಸ್ಯರುಗಳಿಗೆ ಹಣ ವರ್ಗಾವಣೆಗಾಗಿ NEFT/RTGS ಅನುಕೂಲಕ್ಕಾಗಿ ಡಿಜಿಟಲ್ ಆಧಾರಿತ ಮೊಬೈಲ್ ಆಪ್ ಬಿಡುಗಡೆ ಮಾಡಲಾಯಿತು. ಸದಸ್ಯರು ಸಂಸ್ಥೆಯಲ್ಲಿರುವ ತಮ್ಮ ಉಳಿತಾಯ ಖಾತೆಯಿಂದ ಅವರ ಬ್ಯಾಂಕ್ ಖಾತೆಗಳಿಗೆ, ಬ್ಯಾಂಕ್ ಖಾತೆಗಳಿಂದ ಅವರ ಉಳಿತಾಯ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದು ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಹಲವಾರು ಸದಸ್ಯರುಗಳು ಪ್ರಣವದ ಸಾಧನೆಗಳನ್ನು ಶ್ಲಾಘಿಸಿದರು. ಉಪಾಧ್ಯಕ್ಷರಾದ ಪ್ರಶಾಂತ್ ಪೈ ಸ್ವಾಗತಿಸಿ , ನಿರ್ದೇಶಕರಾದ ಭಗವಾನ್ ದಾಸ್ ಅಡ್ಯಂತಾಯ ಧನ್ಯವಾದ ಸಲ್ಲಿಸಿದರು. ಅತಿಥಿ ಪತ್ರಿಕೆಯ ಸಂಪಾದಕ ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಸದಸ್ಯರುಗಳು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ- ಶೇಕಡಾ 10% ಡಿವಿಡೆಂಡ್ ಘೋಷಣೆ – ಸದಸ್ಯರಿಗೆ ಡಿಜಿಟಲ್ ಬ್ಯಾಂಕಿಂಗ್ ಮೊಬೈಲ್ ಆಪ್ ಬಿಡುಗಡೆ





















































