ದಬ್ಬಡ್ಕ : ಕಸ್ತೂರಿ ರಂಗನ್ ಕರಡು ವರದಿಗೆ ಆಕ್ಷೇಪಣೆ ಸಲ್ಲಿಸಲು ಸಭೆ ಸೇರಿದ ನೂರಾರು ಗ್ರಾಮಸ್ಥರು

ಪಶ್ಚಿಮ ಘಟ್ಟಗಳನ್ನು ಒಂದು ಗೂಡಿಸುವ ಅತೀ ಸೂಕ್ಷ್ಮ ಪರಿಸರ ತಾಣದ ವಿಚಾರವಾಗಿ ಕಸ್ತೂರಿ ರಂಗನ್ ವರದಿ ಜಾರಿ ಗೊಳಿಸುವ ಮೊದಲು ಈಗಾಗಲೇ ಸುಪ್ರೀಂ ಕೋರ್ಟ್ ಹಸಿರು ಪೀಠದಲ್ಲಿರುವ ಯೋಜನೆಯ ಸಾಧಕ -ಭಾದಕದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣ ಪತ್ರ ಸಲ್ಲಿಸಲು ಕೇಂದ್ರ ಮುಂದಿನ 60 ದಿನಗಳ ಅವಧಿ ನೀಡಿದ್ದು ಇದರ ಅಂಗವಾಗಿ ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಡಬ್ಬಡ್ಕ ಗ್ರಾಮಸ್ಥರು ತಮ್ಮ ಗ್ರಾಮ ಕಸ್ತೂರಿ ರಂಗನ್ ವರದಿಯ ಪಟ್ಟಿಯಲ್ಲಿ ಸೇರಿರುವ ಕಾರಣ ಗ್ರಾಮಸ್ಥರೆಲ್ಲರು ಆ.16ರಂದು ಸಭೆ ಆಯೋಜಿಸಿ ವರದಿಗೆ ಆಕ್ಷೇಪಣೆ ವ್ಯಕ್ತಪಡಿಸಲು ನಿರ್ಧಾರ ಕೈಗೊಂಡರು.
ತೀರ್ಥರಾಮ ಪೂಜಾರಿಗದ್ದೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು .
ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಲ್. ಪ್ರಧೀಪ್ ಕುಮಾರ್ ವಕೀಲ ಅವರು ಮಾತನಾಡಿ ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಭವಿಷ್ಯದಲ್ಲಿ ಸೇರಿರುವ ಗ್ರಾಮಗಳ ರೈತರು ಬಹಳಷ್ಟು ಸಂಕಷ್ಟ ಅನುಭವಿಸುವ ವಿಚಾರಗಳನ್ನು ಸಭೆಯ ಮುಂದಿಟ್ಟರು. ಇನ್ನೋರ್ವ ಸಂಪಾಜೆ ಕೃಷಿ ಪತ್ತಿನ ಅಧ್ಯಕ್ಷ ಎನ್. ಸಿ. ಅನಂತ ಅವರು ಮಾತನಾಡಿ ಗ್ರಾಮಸ್ಥರೆಲ್ಲ ಗ್ರಾಮ ಪಂಚಾಯತ್ ಮುಖಾಂತರ, ಅಲ್ಲದೇ ವ್ಯೆಯಕ್ತಿಕವಾಗಿ ಕೂಡ ತಮ್ಮ ವಿರೋಧವನ್ನು ಬರಹ ಮೂಲಕ ಕೇಂದ್ರ ಸೂಚಿಸಿದ ಇಲಾಖೆಗೆ ನಿಗದಿತ ಅವಧಿಯ ಒಳಗೆ ರವಾನಿಸಲು ಸಲಹೆ ಸೂಚನೆ ನೀಡಿದರು ಅಲ್ಲದೆ ಚೆಂಬು ಗ್ರಾಮ ಪಂಚಾಯತ್ ಪಿ. ಡಿ. ಒ ಅವರಿಗೆ ಕಸ್ತೂರಿ ರಂಗನ್ ವಿಚಾರವಾಗಿ ವಿಶೇಷ ಗ್ರಾಮ ಸಭೆ ಕರೆಯಲು ಮನವಿ ಸಲ್ಲಿಸಲಾಗುವುದು ಎಂದರಲ್ಲದೆ ಗ್ರಾಮಸ್ಥರೆಲ್ಲರು ಈ ನಿಟ್ಟಿನಲ್ಲಿ ಪಕ್ಷ ಬೇಧ ಮರೆತು ಒಗ್ಗಟ್ಟಾಗಲು ಕೋರಿಕೊಂಡರು.
ಅಶೋಕ ಅಡಮಲೆ ಉಪಸ್ಥಿತರಿದ್ದು ಮಾತನಾಡಿದರು. ವೇದಿಕೆ ಯಲ್ಲಿ ವೆಂಕಟ್ರಮಣ ಬಂಗಾಕೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಕೆ. ಸಿ. ಹರೀಶ್. ಪೆರಾಜೆ ಅವರನ್ನು ವಿಶೇಷವಾಗಿ ಗುರುತಿಸಲಾಯಿತು.
ಸಭೆಯ ಮುಂದೆ ಅರಂಬೂರು ನಾಗಪ್ಪ, ಭುವನೇಶ್ವರ ಕೊಪ್ಪ, ಮಹೇಶ್ವರ್ ಭಟ್, ಶ್ರೀನಿವಾಸ್ ನಿದಿಂಜಿ, ತೀರ್ಥರಾಮ ಬಾಲೆoಬಿ, ಮೊದಲಾದವರು ಉಪಸ್ಥಿತರಿದ್ದರು. ಗಿರೀಶ್ ಹೊಸೂರ್ ಅವರು ಸ್ವಾಗತಿಸಿದರು, ಪ್ರಜ್ವಲ್ ಬೊಳ್ತಾಜೆ ಅವರು ವಂದಿಸಿದರು.

























Leave a Comment

Your email address will not be published. Required fields are marked *

error: Content is protected !!
Scroll to Top