ಜೂ. ೧೨ರಿಂದ ೧೪ರವರೆಗೆ ೩ ದಿನಗಳ ಕಾಲ ಸುಳ್ಯದ ದುರ್ಗಾಪರಮೇಶ್ವರಿ ಕಲಾಮಂದಿರದ ವಠಾರದಲ್ಲಿ ಟೀಂ ಉಬಾರ್ ಉಪ್ಪಿನಂಗಡಿ, ಸುಳ್ಯ ರೈತ ಉತ್ಪಾದಕ ಕಂಪೆನಿ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ., ಸುದ್ದಿ ಕೃಷಿ ಅರಿವು ಕೇಂದ್ರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿರುವ ಹಲಸು ಮತ್ತು ಮಾವು ಮೇಳದ ದ್ವಿತೀಯ ಹಂತದ ಪೂರ್ವಭಾವಿ ಸಭೆ ಮೇ. ೧೯ರಂದು ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
ಮೇಳದ ಗೌರವಾಧ್ಯಕ್ಷ ಜಿ.ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ಜಯರಾಮ ಮುಂಡೋಳಿಮೂಲೆ, ಖಜಾಂಜಿ ರಾಜೇಶ್ ಪ್ರಭು, ಸುಳ್ಯ ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ಸ್ಟಾಲ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಸಾಧಕರ ಸನ್ಮಾನ, ಅತಿಥಿಗಳ ಆಹ್ವಾನದ ಬಗ್ಗೆ ಚರ್ಚಿಸಲಾಯಿತು.
ಜೊತೆ ಕಾರ್ಯದರ್ಶಿ ರಂಜಿತ್ ಅಡ್ತಲೆ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಶ್ರೀಮತಿ ಮಧುರಾ ಜಗದೀಶ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ, ಸಭಾ ನಿರ್ವಹಣಾ ಸಮಿತಿಯ ಡಾ. ಎನ್.ಎ. ಜ್ಞಾನೇಶ್, ತಿಮ್ಮಪ್ಪ ಪಿಂಡಿನಮನೆ, ತಾ.ಪಂ. ಬಿ.ಆರ್.ಪಿ. ಜಯಲಕ್ಷ್ಮೀ, ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ರೇವತಿ ಕೆ.ಆರ್., ಭಾರತಿ ಕಾಳಂಮನೆ, ಸುಮತಿ ಹುಲಿಮನೆ, ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ಪ್ರವೀಣ್‌ಕುಮಾರ್ ಜಯನಗರ, ಲೋಹಿತ್ ಬಾಳಿಕಳ, ಟೀಮ್ ಉಬಾರ್‌ನ ರಾಕೇಶ್ ಪ್ರಭು, ರೈತ ಉತ್ಪಾದಕ ಕಂಪೆನಿಯ ಹರೀಶ್ ಕೊಡಿಯಾಲ, ಧರ್ಮಪಾಲ, ಚಂದ್ರಶೇಖರ ನಂಜೆ, ಬೆಳ್ಯಪ್ಪ ಗೌಡ ಬಳ್ಳಡ್ಕ, ರಂಗನಾಥ್ ಪಿ.ಎಂ., ಭಾಸ್ಕರ ನಾಯರ್, ರಾಮಚಂದ್ರ ಪಲ್ಲತ್ತಡ್ಕ, ಪತ್ರಕರ್ತರಾದ ಗಂಗಾಧರ ಮಟ್ಟಿ, ತೇಜೇಶ್ವರ ಕುಂದಲ್ಪಾಡಿ, ಕೆ.ಟಿ.ಭಾಗೀಶ್, ತೀರ್ಥಾನಂದ ಕಲ್ಮಡ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಹಾಗೂ ವಿವಿಧ ಸಮಿತಿಗಳಿಗೆ ಇನ್ನಷ್ಟು ಜನರನ್ನು ಸೇರಿಸಲಾಯಿತು.
ಜೂ. ೧೨ರಿಂದ – ೧೪ರವರೆಗೆ ಸುಳ್ಯದಲ್ಲಿ ಹಲಸು ಮತ್ತು ಮಾವು ಮೇಳ





















































