ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ (ರಿ.)ನ ಸೌಲಭ್ಯಗಳನ್ನು ಬಳಸಿಕೊಳ್ಳಿ : ವೆಂಕಪ್ಪ ಗೌಡ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ, ತಾಲೂಕಿನ ಪಂಜ ವಲಯದ ಜನಜಾಗೃತಿ ವೇದಿಕೆ, ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಶೌರ್ಯ ವಿಪತ್ತು, ಸ್ಥಳೀಯ ಗಣ್ಯರ ಸಮಲೋಚನಾ ಸಭೆಯು ಮೇ 27 ರಂದು ಬಳ್ಪ ಹಾಲು ಉತ್ಪಾದಕರ ಕಟ್ಟಡದಲ್ಲಿ ನಡೆಯಿತು. ಸಭೆಯನ್ನು ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ವೆಂಕಪ್ಪ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪರ್ಯಾಯ ಸರ್ಕಾರದ ಸೇವೆ ಮಾಡುತ್ತಿದ್ದು, ಗ್ರಾಮಗಳ ಸರ್ವಾಂಗಣ, ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸಂಸ್ಥೆಯ ಸೌಲಭ್ಯಗಳನ್ನು ಇನ್ನೂ ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಶ್ರೀ ಸುಬ್ರಹ್ಮಣ್ಯ ಕುಲ, ನಿರ್ದೇಶಕರು, ಕೃಷಿ ಪತ್ತಿನ ಸಹಕಾರಿ ಸಂಘ ಪಂಜ,ರವರು ಈ ಸಂದರ್ಭದ್ಲಲಿ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ನಮ್ಮ ಊರಿಗೆ ಬಂದ ನಂತರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಎಲ್ಲಾ ರಿತೀಯ ಸಹಕಾರಗಳನ್ನು ನೀಡಿದ್ದು, ಇವರ ಸಹಕಾರವನ್ನು ಎಂದೂ ಮರೆಯಬಾರದೆಂದು ತಿಳಿಸಿದರು.
ಲೋಕನಾಥ ಅಮೆಚೂರು, ನಿಕಟಪೂರ್ವ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸುಳ್ಯರವರು ಮಾತನಾಡಿ ಸದ್ರಿ ಸಂಸ್ಥೆಯು ಎಲ್ಲಾ ಕಾರ್ಯ ಚಟುವಟಿಕೆಗಳು ಎಲ್ಲಾ ಸ್ಥಳೀಯ ಗಣ್ಯ ವ್ಯಕ್ತಿಗಳ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದ್ದು, ಇನ್ನು ಮುಂದೆಯು ಇದೇ ರೀತಿ ಸಹಕಾರ ನೀಡುವಂತೆ, ತಿಳಿಸಿದರು.
ಮಾಧವ ಗೌಡ, ತಾಲೂಕು ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ರವರು, ಪಂಜ ವಲಯದ ದೇವಸ್ಥಾನ ,ದೈವಸ್ಥಾನ ಮತ್ತು ಭಜನಾ ಮಂದಿರದ ಜೀರ್ಣೋದ್ಧಾರ, ಶಾಲೆಗಳ ಮೂಲಭೂತ ಸೌಕರ್ಯಗಳಿಗೆ, ಸಮುದಾಯ ಅಭಿವೃದ್ದಿಗೆ, ಗ್ರಾಮ ಕಲ್ಯಾಣ ಯೋಜನೆ, ಹಿಂದೂ ರುದ್ರಭೂಮಿಗೆ, ನಿರ್ಗತಿಕರಿಗೆ ಮಾಶಸಾನ, ವಿದ್ಯಾರ್ಥಿವೇತನ, ಪರಿಸರ ಕಾರ್ಯಕ್ರಮ, ಶೌರ್ಯ ವಿಪತ್ತು ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳಿಗೆ ಇದೂವರೆಗೆ ಒಟ್ಟು 1,91.09,006( ಒಂದು ಕೋಟಿ ತೊಂಬತ್ತ ಒಂದು ಲಕ್ಷದ ಒಂಬತ್ತು ಸಾವಿರದ ಆರು ರೂಪಾಯಿ ) ಅನುದಾನವನ್ನು ವಿನಿಯೋಗಿಸಲಾಗಿದೆ ಎಂದು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ತಿಳಿಸಿದರು.
ಭಜನಾ ಪರಿಷತ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ಅರ್ಗುಡಿ, ಜನಜಾಗೃತಿ ಅಧ್ಯಕ್ಷರಾದ ಮೋನಪ್ಪ ಗೌಡ ಬೊಳ್ಳಾಜೆ, ಧರ್ಮಪಾಲ ಕಣ್ಕಲ್‌ ವಲಯಾಧ್ಯಕ್ಷರು ಪಂಜ, ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ- ಕೇನ್ಯ ಇದರ ಅಧ್ಯಕ್ಷರಾದ ವಿನೋದ್ ಬೊಳ್ ಮಲೆ, ಒಕ್ಕೂಟ ಅಧ್ಯಕ್ಷರು/ಪದಾಧಿಕಾರಿಗಳು, ಭಜನಾ ಪರಿಷತ್ ವಲಯ ಅಧ್ಯಕ್ಷರಾದ ಪ್ರಕಾಶ್ ನರಿಯಂಗ, ಭಜನಾ ಪರಿಷತ್‌ ಪದಾಧಿಕಾರಿಗಳು, ಜನಜಾಗೃತಿ ತಾಲೂಕು ಕೋ ಅಪ್ಟ್ ಸದಸ್ಯರು, ಶೌರ್ಯ ವಿಪತ್ತು ಸದಸ್ಯರು ಮತ್ತು ಪಂಜ ವಲಯದ ಮೇಲ್ವಿಚಾರಕರಾದ ಮಮತಾ, ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕರಾದ ಮಮತಾ ಎನ್ ಸ್ವಾಗತಿಸಿದರು. ತಾರಾ ಸೇವಾಪ್ರತಿನಿಧಿ ವಂದಿಸಿದರು.







































































































Leave a Comment

Your email address will not be published. Required fields are marked *

error: Content is protected !!
Scroll to Top