ಟ್ರೇಲರ್‌ನಲ್ಲೇ ಗಮನ ಸೆಳೆದ “ಕ್ಷಮೆಯಿರಲಿ ತಂದೆ” ಸಿನಿಮಾ ನಾಳೆ(ಜೂ.12) ತೆರೆಗೆ – ಸುಳ್ಯದಲ್ಲಿಂದು ಪೋಸ್ಟರ್ ಬಿಡುಗಡೆ

ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿರುವ ಎಂ ಎನ್ ಸುರೇಶ್ (ಮೂಗ್ ಸುರೇಶ್ ) ಈಗ ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಕ್ಷಮೆಯಿರಲಿ ತಂದೆ’
ಜೂನ್ 12ರಂದು (ನಾಳೆಯಿಂದ) ಸುಳ್ಯ ಸೇರಿ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದ್ದು, ಇದರ ಇದರ ಅಂಗವಾಗಿ ಸುಳ್ಯದಲ್ಲಿ ಪೋಸ್ಟರ್ ಬಿಡುಗಡೆ ಇಂದು ನಡೆಯಿತು.











































































































ಈ ಸಂದರ್ಭದಲ್ಲಿ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಜೇನು ವ್ಯವಸಾಯಗಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಗಂಗಾಧರ ಪಿ.ಎಸ್., ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರಿಜ ಸುಪ್ರೀತ್ ಮೋಂಟಡ್ಕ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ದೊಡ್ಡಣ್ಣ ಬರೆಮೇಲು, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಸೋಣಂಗೇರಿ ಶ್ರೀಕೃಷ್ಣಾ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಚಲನ ಚಿತ್ರದ ಸಹ ನಿರ್ಮಾಪಕ, ಉಸ್ತುವಾರಿ ಸುಪ್ರೀತ್ ಮೋಂಟಡ್ಕ ಉಪಸ್ಥಿತರಿದ್ದರು.

ಸುಳ್ಯ ಭಾರತ್‌ ಸಿನಿಮಾ ಚಿತ್ರ ಮಂದಿರದಲ್ಲಿ ಮಧ್ಯಾಹ್ನ 2.30 ಹಾಗೂ ರಾತ್ರಿ 7.30ಕ್ಕೆ ಪ್ರದರ್ಶನ ಇರಲಿದೆ ಎಂದು ಚಿತ್ರಸ ಮಾರ್ಕೆಟಿಂಗ್ ಉಸ್ತುವಾರಿ ವಹಿಸಿರುವ ಸುಪ್ರೀತ್ ಮೋಂಟಡ್ಕ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top