ಅರಂಬೂರು ಘಟಕ ಗೌಡ ಸಮಿತಿ ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ಇದರ ವತಿಯಿಂದ ಅರಂಬೂರು ವಲಯದ ಗೌಡ ಬಾಂಧವರಿಗೆ ಗದ್ದೆಯಲ್ಲಿ ಒಂದು ದಿನ ಕೂಡಿ ಆಡೋಣ ಕ್ರೀಡಾ ಸ್ಪರ್ಧೆಗಳು 21ರಂದು ಪಡ್ಪು ಪದ್ಮಯ್ಯನವರ ಗದ್ದೆಯಲ್ಲಿ ನಡೆಯಲಿದೆ.ಬೆಳಿಗ್ಗೆ 9.30ರಿಂದ ಸ್ಪರ್ಧೆ ಆರಂಭವಾಗಲಿದ್ದು ಸ್ಪರ್ಧೆಯನ್ನು ಪ್ರಗತಿಪರ ಕೃಷಿಕರಾದ ಅಪ್ಪಯ್ಯ ಗೌಡ ಪಡ್ಪು ಉದ್ಘಾಟಿಸಲಿದ್ದಾರೆ. ಸ್ಪರ್ಧೆಯ ವಿವರ ಈ ಕೆಳಗಿನಂತಿದೆ.ಕೆಸರುಗದ್ದೆ ಓಟ (ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ)ನಿಧಿ ಶೋಧ (ಸಾರ್ವಜನಿಕರಿಗೆ)ಮಡಿಕೆ ಒಡೆಯುವುದು (ಪುರುಷರಿಗೆ ಮಹಿಳೆಯರಿಗೆ ಪ್ರತ್ಯೇಕ,ಹಾಳೆಯಲ್ಲಿ ಕುಳಿತು ಎಳೆಯುವುದು (ದಂಪತಿಗಳಿಗೆ)ನಿಂಬೆಹಣ್ಣು ಓಟ (5 ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ- ಹುಡುಗರಿಗೆ ಹುಡುಗಿಯರಿಗೆ ಪ್ರತ್ಯೇಕ,ಬಲೂನು ಒಡೆಯುವುದು 12ರಿಂದ 4ನೇ ತರಗತಿವರೆಗಿನ ಮಕ್ಕಳಿಗೆ-ಹುಡುಗರಿಗೆ ಹುಡುಗಿಯರಿಗೆ ಪ್ರತ್ಯೇಕಹಗ್ಗ ಜಗ್ಗಾಟ (ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಹೆಚ್ಚಿನ ಗೌಡ ಬಾಂಧವರು ಭಾಗವಹಿಸಿ ಈ ಕ್ರೀಡೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.
ಜೂ.21; ಅರಂಬೂರು ವಲಯದ ಗೌಡ ಬಾಂಧವರಿಗೆ ಗದ್ದೆಯಲ್ಲಿ ಒಂದು ದಿನ ಕೂಡಿ ಆಡೋಣ ವಿವಿಧ ಕ್ರೀಡಾ ಸ್ಪರ್ಧೆಗಳು



























































