ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸರಕಾರಿ ಹಿರಿಯವ ಪ್ರಾಥಮಿಕ ಶಾಲೆ ಕೊಯಿಕುಳಿ- ದುಗಲಡ್ಕ ಶಾಲೆಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಜುಲೈ 31ರಂದು ಶಾಲಾ ಸಭಾಂಗಣದಲ್ಲಿ ತುಳು ಕುರಲ್ ಕೂಟ ದುಗ್ಗಲಡ್ಕ, ಮಿತ್ರ ಯುವಕ ಮಂಡಲ ಕೊಯಿಕುಳಿ ಇದರ ಸಹಯೋಗದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಅಧ್ಯಕ್ಷರಾದ
ಜೆ. ಎಪ್. ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15ರ ವಲಯಾಡಳಿತ ಮಂಡಳಿಯ ನ್ಯೂ ಲೋಮ್ ಎಕ್ಸ್ಂಟನ್ಸ್ ನ ಸಂಯೋಜಕರಾದ ಜೆ ಎಫ್ ಡಿ ಜಗದೀಶ್ ರೈ ಪೆರುವಾಜೆ ಆಗಮಿಸಿ, ಪುಸ್ತಕ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ತುಳು ಕುರಲ್ ಕೂಟ ದುಗ್ಗಲಡ್ಕ ಇದರ ಅಧ್ಯಕ್ಷರಾದ ರಮೇಶ್ ನೀರಬಿದಿರೆ, ಮಿತ್ರ ಯುವಕ ಮಂಡಲ (ರಿ.) ಕೊಯಿಕುಳಿ ಇದರ ಅಧ್ಯಕ್ಷರಾದ ತೀರ್ಥರಾಮ ಕೊಯಿಕುಳಿ, ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕೊಯಿಕುಳಿ ಇಲ್ಲಿಗೆ ಸುಮಾರು 14,000ಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು ಶಾಲೆಗೆ ನೀಡಿದ್ದು ಶಿಕ್ಷಣ ಯೋಜನೆಯತ್ತ ಕೖ ಜೋಡಿಸಿರುತ್ತಾರೆ.
ಶಾಲಾ ಮುಖ್ಯ ಶಿಕ್ಷಕ ಬೆಳ್ಯಪ್ಪ ಗೌಡ ಕೋಡ್ತುಗುಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ತುಳು ಕುರಲ್ ಕೂಟ ದುಗ್ಗಲಡ್ಕ ಇದರ ಕಾರ್ಯದರ್ಶಿ ಭಾಗ್ಯೇಶ್ ಕೊಯಿಕುಳಿ ವಂದಿಸಿದರು.
ಈ ಸಂದರ್ಭದಲ್ಲಿ ಜೇಸಿಐ ಭಾರತ ವಲಯ 15ರ ರಕ್ತದಾನ ವಿಭಾಗ ಸಂಚಾಲಕರಾದ ಜೆಸಿ. ಪ್ರದೀಪ್ ಕುಮಾರ್ ರೈ ಬೆಳ್ಳಾರೆ, ಮುಖಂಡರಾದ ಸುಪ್ರೀತ್ ಮೋಂಟಡ್ಕ, ಮಂಜುನಾಥ್ ಮಡ್ತಿಲ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಸದಸ್ಯರುಗಳು, ಪೋಷಕರು, ಶಾಲಾ ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





































































