ಕೊಲ್ಲಮೊಗ್ರು : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ. ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಲ್ಲಮೊಗ್ರು ಎ, ಕೊಲ್ಲಮೊಗ್ರು ಬಿ, ಕಟ್ಟ ಗೋವಿಂದನಗರ ಮತ್ತು ಕಲ್ಮಕಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕೊಲ್ಲಮೊಗ್ರು ಶ್ರೀ ಮಯೂರ ಕಲಾ ಮಂದಿರದಲ್ಲಿ ಅಧ್ಯಕ್ಷರಾದ ಮಾಧವ ಚಾಂತಳರವರ ಅಧ್ಯಕ್ಷತೆಯಲ್ಲಿ ಜೂ.19ರಂದು ನಡೆಯಿತು.
ಈ ಸಮಾರಂಭವನ್ನು ಕೊಲ್ಲಮೊಗ್ರು ಕಟ್ಟ ಗೋವಿಂದನಗರದ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶೇಖರ ಅಂಬೆಕಲ್ಲುರವರು ದೀಪ ಪ್ರಜ್ವಲನೆ ಮಾಡಿ ಶುಭಹಾರೈಸಿದರು.
ಈ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ದಕ್ಷಿಣ ಕನ್ನಡ 2 ರ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕರವರು ಜವಾಬ್ದಾರಿಯನ್ನು ಹಸ್ತಾಂತರವನ್ನು ಮಾಡಿ, ಕ್ಷೇತ್ರದ ಹಿನ್ನಲೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತ, ನೂತನ ಪದಾಧಿಕಾರಿಗಳು ಉತ್ತಮವಾದ ಸೇವೆಯನ್ನು ಮಾಡಬೇಕು. ಸಂಘಗಳ ಗುಣಮಟ್ಟವನ್ನು ಉತ್ತಮ ಪಡಿಸಬೇಕು. ಯೋಜನೆಯ ಕಾರ್ಯಕರ್ತರು ಶಾಶ್ವತವಾಗಿ ಇರುವುದಿಲ್ಲ, ಆದರೆ ಸಂಘಗಳು ಮತ್ತು ಒಕ್ಕೂಟಗಳು ಯಾವಾಗಲು ಶಾಶ್ವತವಾಗಿ ಇರುತ್ತದೆ. ಆದ್ದರಿಂದ ಒಕ್ಕೂಟದ ಪದಾಧಿಕಾರಿಗಳು ಯೋಜನೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಪಡೆದು ಕೊಳ್ಳಬೇಕು ಎಂದು ಹೇಳಿದರು.
ಈ ಸಮಾರಂಭದ ಮುಖ್ಯ ಅತಿಥಿಗಳಾದ ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷರಾದ ಗಣೇಶ್ ಭಟ್ ರವರು, ಸುಳ್ಯ ತಾಲೂಕು ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮಾರಡ್ಕರವರು, ಕಲ್ಮಕಾರು ಕಡಬ ನ್ಯಾಯವಾದಿಗಳಾದ ಗುರುಚರಣ್ ಕೊಪ್ಪಡ್ಕರವರು, ಸುಬ್ರಹ್ಮಣ್ಯ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ವಲಯ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳರವರು ಶುಭಕೋರಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡ, ಕೊಲ್ಲಮೊಗ್ರು ಎ, ಕೊಲ್ಲಮೊಗ್ರು ಬಿ, ಕಟ್ಟ ಗೋವಿಂದನಗರ ಮತ್ತು ಕಲ್ಮಕಾರು ಒಕ್ಕೂಟಗಳ ನಿಕಟ ಪೂರ್ವ ಅಧ್ಯಕ್ಷರುಗಳು ಮತ್ತು ನೂತನ ಅಧ್ಯಕ್ಷರುಗಳು, ವಲಯ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಸತೀಶ್ ಟಿ ಎನ್ ರವರು, ಕೊಲ್ಲಮೊಗ್ರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಸಾವಿತ್ರಿರವರು, ಕಲ್ಮಕ್ಕಾರು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ಪದ್ಮಾವತಿರವರು, ಶಿರೂರು ಚಾಂತಳ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯವರಾದ ರೇಖಾರವರು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ವರದಿ ವಾಚನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರನ್ನು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳನ್ನು, ನವಜೀವನ ಸಮಿತಿಯ ಸದಸ್ಯರನ್ನು, ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳನ್ನು, ಒಕ್ಕೂಟಗಳ ನಿಕಟ ಪೂರ್ವ ದಾಖಲಾತಿ ಸಮಿತಿಯ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಲ್ಲಮೊಗ್ರು ಎ, ಕೊಲ್ಲಮೊಗ್ರು ಬಿ, ಕಟ್ಟ ಗೋವಿಂದನಗರ ಮತ್ತು ಕಲ್ಮಕಾರು ಒಕ್ಕೂಟಗಳ ಎಲ್ಲಾ ಪಾಲುದಾರ ಬಂಧುಗಳು, ನವಜೀವನ ಸಮಿತಿಯ ಸದಸ್ಯರುಗಳು, ಸುಭ್ರಮಣ್ಯ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ವಲಯ ಭಜನಾ ಪರಿಷತ್ ನ ಪದಾಧಿಕಾರಿಗಳು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಕೊಲ್ಲಮೊಗ್ರು ಬಿ ಒಕ್ಕೂಟದ ಅಧ್ಯಕ್ಷರಾದ ಹೇಮಂತ್ ಸಿ ದೋಲನಮನೆರವರು ಕಾರ್ಯನಿರೂಪಿಸಿದರು.
ಕೊಲ್ಲಮೊಗ್ರು ಬಿ ಒಕ್ಕೂಟದ ಉಪಾಧ್ಯಕ್ಷರಾದ ಚಂದ್ರಶೇಖರ ಕೋನಡ್ಕರವರು ಸ್ವಾಗತಿಸಿ, ಕಟ್ಟ ಗೋವಿಂದನಗರ ಒಕ್ಕೂಟದ ಕಾರ್ಯದರ್ಶಿರವರಾದ ಸದಾಶಿವ ಕಟ್ಟರವರು ಧನ್ಯವಾದವಿತ್ತರು.



















































































































Leave a Comment

Your email address will not be published. Required fields are marked *

error: Content is protected !!
Scroll to Top