ಅರಣ್ಯ ಇಲಾಖೆ ಸಂಪಾಜೆ ಶಾಖೆ, ಕರ್ನಾಟಕ ಜರ್ನರ್ಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕ ಮತ್ತು ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕದಲ್ಲಿ ವನಮಹೋತ್ಸವ ಕಾರ್ಯಕ್ರಮ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.23 ರಂದು ನಡೆಯಿತು.
ಸಭಾ ಕಾರ್ಯಕ್ರಮದ ಮೊದಲು ಶಾಲಾ ವಠಾರದಲ್ಲಿ ಸಾಂಕೇತಿಕವಾಗಿ ಬಾದಾಮಿ ಗಿಡವನ್ನು ನೆಡಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಜಿ. ರಾಮಚಂದ್ರ ವಹಿಸಿ ಮಾತನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಂಪಾಜೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಅವರು ಮಾತನಾಡಿ ” ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಗಿಡವನ್ನು ನೀಡುವುದರೊಂದಿಗೆ ಪರಿಸರ ಸಂರಕ್ಷಣೆ ಆಗದು, ನೆಟ್ಟ ಗಿಡವನ್ನು ಪಾಲನೆ ಪೋಷಣೆ ಮಾಡಿ ಬೆಳೆಸಬೇಕು. ಅಲ್ಲದೇ ಪರಿಸರ ಇದ್ದರೆ ಮಾತ್ರ ಮನುಷ್ಯ
ಜೀವಂತವಾಗಿರಲು ಸಾಧ್ಯ. ಪ್ರತಿಯೊಬ್ಬರು ಕೂಡಾ ಗಿಡಗಳನ್ನು ನೆಡುವುದರೊಂದಿಗೆ ಪರಿಸರದ ಮಹತ್ವದ ಬಗ್ಗೆ ಇತರರಿಗೂ ಪ್ರೇರೇಪಣೆಯಾಗುವಂತೆ ಮಾಡಬೇಕಾಗಿದೆ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಶಾಲೆಗಳಲ್ಲಿ ಕಾರ್ಯಕ್ರಮ ಮಾಡುವುದರೊಂದಿಗೆ ಮುಂದಿನ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಅರಿವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ” ಎಂದು ಶುಭ ಹಾರೈಸಿದರು.
ಶಾಲಾ ಸಂಚಾಲಕ ಎಸ್. ಪಿ ಲೋಕನಾಥ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಮನಸ್ವಿ, ಆರಾಧ್ಯ, ಫಾತಿಮತ್ ಶಹಿಬಾ, ಫಾತಿಮತ್ ಜುಲ್ಪಾ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಹಾಡನ್ನು ಹಾಡಿದರು.
ಸಂಪಾಜೆ ಗಸ್ತು ಅರಣ್ಯ ಪಾಲಕ ಮನೋಜ್ ಬಿ.ಬಿ, ಶಾಲಾ ಆಡಳಿತ ಮಂಡಳಿ ನಿದೇಶಕ ಪಿ.ಎ ಅಬ್ದುಲ್ಲ, ಸುದ್ದಿ ಪತ್ರಿಕೆಯ ಹಿರಿಯ ವರದಿಗಾರ ಕೃಷ್ಣ ಬೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿoಗೋಡಿ , ಖಜಾಂಜಿ ಅನಿಲ್ ಕಳಂಜ, ಪದಾಧಿಕಾರಿಗಳಾದ ರಮೇಶ್ ನೀರಬಿದಿರೆ, ಭಾಗೀಶ್ ಕೆ.ಟಿ, ಕರುಣಾಕರ ಕೆಮ್ಮಾರ, ಅರಣ್ಯ ಇಲಾಖಾ ಸಿಬ್ಬಂದಿ ಪವನ್ ಕುಮಾರ್, ಯು.ಆರ್ ಸತ್ಯಜಿತ್, ಶಾಲಾ ಶಿಕ್ಷಕಿ ಉಷಲತಾ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಪ್ಪ ಜಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಧನ್ಯಶ್ರೀ ಯು.ಜೆ ಸ್ವಾಗತಿಸಿ, ಕೆಜೆಯು ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ ವಂದಿಸಿದರು, ಶಿಕ್ಷಕಿ ಭವಿತ ಕೆ.ಪಿ ಕಾರ್ಯಕ್ರಮ ನಿರೂಪಿಸಿದರು.





























































