ಪಂಜ : ಸ್ವದೇಶಿ ಖಾದ್ಯ ಮೇಳ ಉದ್ಘಾಟನೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾಫಿಕೃಪಾ ಕಟ್ಟಡ, ರಾಜಾಸೀಟ್ ರಸ್ತೆ, ಮಡಿಕೇರಿ, ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಇವರ ಜಂಟಿ ಆಶ್ರಯದಲ್ಲಿ ಆಟಿ ನೆಂಪು-2026 ಇದರ ಅಂಗವಾಗಿ ಆ.7ರಿಂದ ಆ. 9 ವರೆಗೆ ಟೀಮ್ ಉಬಾರ್ ಇವರ ನೇತೃತ್ವದಲ್ಲಿ ಸ್ವದೇಶಿ ಖಾದ್ಯ ಮೇಳ
ಆ. 7 ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಪಾರ್ವತಿ ಸಭಾಭವನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಹಿರಿಯ ಸಾಹಿತಿ ಡಾ. ಪ್ರಭಾಕರ್ ಶಿಶಿಲ ಉದ್ಘಾಟಿಸಿ ಶುಭಹಾರೈಸಿದರು.
ಜೇ ಪ್ರದರ್ಶನ ಪಂಜ ಪಂಚಶ್ರೀ ಅಧ್ಯಕ್ಷ ದೇವಿ ಪ್ರಸಾದ್‌ ಚಿಕ್ಕುಳಿ ಸಭಾಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಜಾಕೆ, ಪಂಜ ಲಯನ್ಸ್ ಅಧ್ಯಕ್ಷ ಆನಂದ ಗೌಡ ಜಳಕದಹೊಳೆ, ಪಂಜಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ ದೇವಿ ಪ್ರಸಾದ್ ಕಾನತ್ತೂರ್, ಕಾರ್ಯಕ್ರಮ ನಿರ್ದೇಶಕ ವಿಜೇಶ್ ಹಿರಿಯಡ್ಕ,
ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಪ್ರಕಾಶ್ ಅಳ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿದೇವಿ ಪ್ರಸಾದ್ ಚಿಕ್ಕುಳಿ ಸ್ವಾಗತಿಸಿದರು.ಶಶಿಧರ ಪಳಂಗಾಯ ನಿರೂಪಿಸಿದರು. ಪ್ರಕಾಶ್ ಅಳ್ಳೆ ವಂದಿಸಿದರು.



















Leave a Comment

Your email address will not be published. Required fields are marked *

error: Content is protected !!
Scroll to Top