ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದಿಂದ ಅಂಜಿಕ್ಕಾರ್ ನಲ್ಲಿ ಬಡ ಮಹಿಳೆ ಸವಿತಾರಿಗೆ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಳ್ಯ ವಲಯದ ಸದಸ್ಯರು ಸೇರಿ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಜಿಕ್ಕಾರ್ ಎಂಬಲ್ಲಿ ವಾಸವಾಗಿರುವ ಬಡ ಮಹಿಳೆ ಮತ್ತು ಮಕ್ಕಳಿಗೆ ನಿರ್ಮಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ಜೂ.24 ರಂದು ಅಂಜಿಕ್ಕಾರ್ ನಲ್ಲಿ ನಡೆಯಿತು.




















































































































ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡರು ಮಾತನಾಡಿ ” ಶೌರ್ಯ ವಿಪತ್ತು ಘಟಕದವರು‌ ತಮ್ಮ ಬದುಕಿನ ದೈನಂದಿನ ಜಂಜಾಟದೊಂದಿಗೆ ಬಡ ಮಹಿಳೆಗೆ ಮನೆ ನಿರ್ಮಿಸಿ ಕೊಟ್ಟು ಅವರ ಕಣ್ಣೀರು ಒರೆಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಜನಾಧಿಕಾರಿ ಮಾಧವ ಗೌಡರು ಮಾತನಾಡಿ ಬಡ ಮಹಿಳೆ ಕುಟುಂಬದವರಿಗೆ ಶೌರ್ಯ ವಿಪತ್ತು ಘಟಕದವರು ಮನೆ ನಿರ್ಮಿಸಿ ಕೊಡುವುದರ ಮೂಲಕ ಸಮಾಜದಲ್ಲಿ ಮಾದರಿ ಕೆಲಸ ಮಾಡಿದ್ದಾರೆ.ಇದು ದೇವರು ಮೆಚ್ಚುವ ಕೆಲಸವಾಗಿದೆ.ಸವಿತ ಮತ್ತು ಕುಟುಂಬದವದು ಈ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳಿ ಜೀವನದಲ್ಲಿ ಅಭಿವೃದ್ಧಿ ಕಾಣಲಿ.ಶೌರ್ಯ ವಿಪತ್ತು ಘಟಕದವರಿಗೆ ದೇವರು ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಅಜ್ಜಾವರ ವಲಯ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಸುಳ್ಯ ವಲಯಾಧ್ಯಕ್ಷ ವಿಜಯಕುಮಾರ್ ಉಬರಡ್ಕ, ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲು, ಶೌರ್ಯ ಘಟಕದ ಕ್ಯಾಪ್ಟನ್ ಪಿ.ಜಿ.ಜಯರಾಮ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಬಾಲಚಂದ್ರ ಪರಿವಾರಕಾನ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ, ಪತ್ರಕರ್ತ ತೇಜೇಶ್ವರ ಕುಂದಲ್ಪಾಡಿ, ಸವಿತಾ ಅಂಜಿಕ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಸವಿತಾ ಮತ್ತು ‌ಮಕ್ಕಳಾದ ರಾಧಿಕಾ ಮತ್ತು ರಾಕೇಶ್ ರವರಿಗೆ ಮಂಜುನಾಥ ಸ್ವಾಮಿಯ ಭಾವಚಿತ್ರ ಹಾಗೂ ಹಣ್ಣು ಹಂಪಲು ದೀಪ ನೀಡಿ‌ ಯೋಜನಾಧಿಕಾರಿಯವರ ನೇತೃತ್ವದಲ್ಲಿ ಮನೆಯನ್ನು ಹಸ್ತಾಂತರಿಸಲಾಯಿತು. ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು. ‌
ರೇಖಾ ಪ್ರಾರ್ಥಿಸಿ, ವಲಯ ಮೇಲ್ವಿಚಾರಕ ದಿನೇಶ್ ರವರು ಸ್ವಾಗತಿಸಿದರು. ಶೌರ್ಯ ಘಟಕದ ಸಂಯೋಜಕ ಸುರೇಶ್ ಪರಿವಾರಕಾನ ವಂದಿಸಿದರು.
ಶೌರ್ಯ ಸ್ವಯಂ ಸೇವಕರಾದ ರತೀಶನ್ ಅರಂಬೂರು, ಪ್ರಶಾಂತ ಡಿ, ಸುನಿಲ್, ಶರತ್ ಕಲ್ಲುಗುಂಡಿ, ಯತೀಶ್ ಡಿ, ಹರ್ಷಿತ್, ಮಧುಸೂದನ್ ದೊಡ್ಡೇರಿ, ಚಿದಾನಂದ ಪರಿವಾರಕಾನ, ದಿನೇಶ್ ಅರಂಬೂರು, ಭರತ್ ನೆಡ್ಚಿಲು, ಗುರುರಾಜ್ ನೆಡ್ಚಿಲು, ಕೌಶಿಕ್ ಕಾನತ್ತಿಲ, ಜಯಪ್ರಕಾಶ್ ದೊಡ್ಡೇರಿ, ಯೋಗೀಶ್, ಬಾಲಚಂದ್ರ, ಲವಕುಮಾರ್ ರವರು ಸಹಕರಿಸಿದರು.ಅರಂಬೂರು ಒಕ್ಕೂಟದ ನಿಯೋಜಿತ ಅಧ್ಯಕ್ಷ ಅಶೋಕ ಪೀಜೆ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top