ಆಲೆಟ್ಟಿ:ಕೂರ್ನಡ್ಕ – ಕಾಪುಮಲೆ ರಸ್ತೆಗೆ ರೂ.10.00 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂರ್ನಡ್ಕ – ಕಾಪುಮಲೆ ರಸ್ತೆಗೆ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ.10.00ಲಕ್ಷ ಅನುದಾನ ಬಿಡುಗಡೆ ಗೊಂಡಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಸತ್ಯಕುಮಾರ್ ಆಡಿಂಜಾರವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಶಿಫಾರಾಸ್ಸಿನ ಮೇರೆಗೆ ಸತತವಾಗಿ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಈ ಅನುದಾನ ಬಿಡುಗಡೆಗೊಂಡಿದೆ.



















































































































ಈ ಭಾಗದ ಪಲಾನುಭವಿಗಳ ಬಹು ಬೇಡಿಕೆಯ ಈ ರಸ್ತೆಗೆ ಇಂದು ಗುದ್ದಲಿ ಪೂಜೆ ನಡೆಸಿ ಕಾಮಗಾರಿ ಪ್ರಾರಂಭ ಮಾಡಲಾಯಿತು.

ಆಲೆಟ್ಟಿ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಸತ್ಯಕುಮಾರ್ ಆಡಿಂಜಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ದೇವಪ್ಪ ನಾಯ್ಕ ಹೊನ್ನಡಿ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯ ಕೆ ಆರ್ ತೇಜಕುಮಾರ್ ಬಡ್ಡಡ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ ಶುಭ ಹಾರೈಸಿದರು.
ಸ್ಥಳೀಯರಾದ ಪೊರುಷೋತ್ತಮ ದೋಣಿಮೂಲೆ, ರಾಮಚಂದ್ರ ಪಾವಲೀಕಜೆ, ತೀರ್ಥರಾಮ ಬಡ್ಡಡ್ಕ, ಮಾಧವ ಪಾವಳಿಕಜೆ, ಸುಕುಡಪ್ಪ ನಾಯ್ಕ, ತಿಮ್ಮಪ್ಪ ಗೌಡ ನೆಡ್ಚಿಲು, ತೀರ್ಥರಾಮ, ರಮೇಶ್ ಪಾವಳಿಕಜೆ, ಶ್ರೀಮತಿ ಸರೋಜಿನಿ ಪಾವಲಿಕಜೆ, ಶ್ರೀಮತಿ ಸುಲೋಚನ, ಉಪಸ್ಥಿತರಿದ್ದರು. ಉದಯಕಿರಣ ಕಾಪುಮಲೆ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top