ಜಿನಿಗುವ ಮಳೆಯ ನಡುವೆಯೂ ನಡೆದ ಆರಂತೋಡು ಗ್ರಾಮ ಪಂಚಾಯತಿನ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ.

ಅರಂತೋಡು, ಜೂ. 28 : ಆರಂತೋಡು ಗ್ರಾಮ ಪಂಚಾಯತ್ ನ ಮಹತ್ವಕಾಂಕ್ಷಿ ಯೋಜನೆಯಾದ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮದ ಸರಣಿಯ 85ನೇ ಕಾರ್ಯಕ್ರಮವು ಸುವರ್ಣ ಸಂಭ್ರಮದಲ್ಲಿರುವ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಶೋಸಿಯೇಶ್ ಮತ್ತು ವಿಖಾಯ ತುರ್ತು ನಿರ್ವಹಣಾ ಸಂಘ ಆರಂತೋಡು ಇದರ ಸಹಯೋಗದೊಂದಿಗೆ ನಡೆಯುತು.
ಆರಂತೋಡು ಗ್ರಾಮ ಪಂಚಾಯತ್ 2018 ಡಿಸೆಂಬರ್ ತಿಂಗಳಿಂದ ಕೊನೆಯ ಆದಿತ್ಯವಾರದಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ರಾಷ್ಟ್ರಿಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಜೂ.28ರಂದು ಮಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಆನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ನ ಪದಾಧಿಕಾರಿಗಳು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರು , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಸ್ವಚ್ಛತಾ ಘಟಕದ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತ್ನೊಂದಿಗೆ ನಿರಂತರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಸುವ ಸ್ವಚ್ಛತಾ ಸೇನಾನಿಗಳು ಭಾಗವಹಿಸಿದ್ದರು.





















































































































Leave a Comment

Your email address will not be published. Required fields are marked *

error: Content is protected !!
Scroll to Top