ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ಯು ಟಿ ಖಾದರ್ ಅವರಿಗೆ ಜುಲೈ 6 ರಂದು ಸುಳ್ಯದ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಸಾರ್ವಜನಿಕ ಅಭಿನಂದನಾ ಸಭೆ ನಡೆಯಲಿದೆ ಎಂದು ಅಭಿನಂದನಾ ಸಮಿತಿಯ ಸಂಚಾಲಕ ಭರತ್ ಮುಂಡೋಡಿ ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜೂ.27ರಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜಕೀಯ ರಹಿತವಾಗಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಎಲ್ಲಾ ರಾಜಕೀಯ ಪಕ್ಷದವರಿದ್ದಾರೆ.ಸಮಾರಂಭವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸುಳ್ಯದ ಎಲ್ಲಾ ಮುಖಂಡರುಗಳು ಸೇರಿ ಸುಳ್ಯದ ಸರ್ವರನ್ನು ಒಗ್ಗೂಡಿಸಿಕೊಂಡು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು। ಭಾಗೀರಥಿ ಮುರುಳ್ಯ ರವರು ವಹಿಸಲಿದ್ದು,ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿ. ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ರವರು ನೆರವೇರಿಸಲಿದ್ದಾರೆ.
ಸಮಾರಂಭದ ವೇದಿಕೆಯಲ್ಲಿ ಮೂರು ಧರ್ಮದ ಧಾರ್ಮಿಕ ಗುರುಗಳನ್ನು ಆಹ್ವಾನಿಸಲಾಗಿದ್ದು
ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಬಹು
ಅಹಮ್ಮದ್ ನಈಮ್ ಮುಅಬರಿ ಫೈಝಿ ಖತೀಬರು ಜುಮಾಮಸಿದ್ ಪೇರಡ್ಕ-ಗೂನಡ್ಕ ಹಾಗೂ ರೆಡೇ ಫಾ । ಥೋಮಸ್ ಪಾರೆಕ್ಕಾಟಿಲ್ ಧರ್ಮಗುರುಗಳು ಸೈಂಟ್ ಮೇರಿಸ್ ಚರ್ಚ್ ಗುತ್ತಿಗಾರು ಇವರುಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.
ಸಮಾರಂಭದ ಆರಂಭದಲ್ಲಿ ಬೆಳಿಗ್ಗೆ 10 ಗಂಟೆಗೆ ಜ್ಯೋತಿ ವೃತ್ತದಿಂದ ಮೆರವಣಿಗೆ ನಡೆಯಲಿದ್ದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ರಿ.
ಕಮಿಟಿ ಬಿ. ಇದರ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ ಚಾಲನೆ ನೀಡಲಿದ್ದಾರೆ.
ಸಮಾರಂಭದ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಂದ ಸಚಿವರಿಗೆ ಮನವಿಗಳನ್ನು ನೀಡಲು ಸಹಕಾರಿಯಾಗುವಂತೆ ಕೌಂಟರ್ ವ್ಯವಸ್ಥೆಯನ್ನು ಮಾಡಲಾಗುವುದು ಸಾರ್ವಜನಿಕರಿಗೆ ಇದರ ಸದುಪಯೋಗವನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ನಗರ ಸೂಡ ಆಧ್ಯಕ್ಷರಾದ ಕೆಎಂ ಮುಸ್ತಫ, ಕರ್ನಾಟಕ ರಾಜ್ಯ ಅರೆ ಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮುಖಂಡರುಗಳಾದ ಹರೀಶ್ ರೈ ಉಬರಡ್ಕ, ಡಾ. ಎನ್ ಎ ಜ್ಞಾನೇಶ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ
ಬೊಳ್ಳೂರು ಉಪಸ್ಥಿತರಿದ್ದರು.
ಜು.6; ಸಚಿವ ಯು. ಟಿ ಖಾದರ್ ಅವರಿಗೆ ಅಭಿನಂದನಾ ಸಮಾರಂಭ






























































