ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಧ್ಯಕ್ಷರಾದ ಸದಾನಂದ ಮಾವಜಿ ಇವರ ನೇತೃತ್ವದಲ್ಲಿ ಐನ್‌ಮನೆಗಳ ತುಲನಾತ್ಮಕ ಅಧ್ಯಯನ ಕಾರ್ಯಕ್ಕಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಎರಡು ದಿನಗಳ ಅಧ್ಯಯನ ಪ್ರವಾಸ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ಸಮೀಪದಲ್ಲಿರುವ ಕೊಳಗಿ ಮನೆ, ದೇವಂಗಿ ಮನೆ, ಕೊಳಾವರ ಮನೆ ಹಾಗೂ ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದಲ್ಲಿರುವ ಕೊರ್ಗಿ ಮನೆಗಳಿಗೆ ಭೇಟಿ ನೀಡಲಾಯಿತು.
ಮನೆಗಳ ಬಗೆಗಿನ ವಿನ್ಯಾಸ, ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳು, ಮೂಲ, ಅಂದಿಗೂ ಇಂದಿಗೂ ಇರುವ ಸಾಮ್ಯತೆ ಮತ್ತು ಭಿನ್ನತೆ ಹಾಗೂ ಮತ್ತಿತರ ಮಾಹಿತಿಯನ್ನು ಆಯಾ ಮನೆಯವರಿಂದ ಪಡೆದುಕೊಳ್ಳಲಾಯಿತು.
ಕೊಳಗಿ ಚೌಕಿಮನೆ, ಹಳೆ ದೇವಂಗಿಯಲ್ಲಿರುವ ದೇವಂಗಿ ಚೌಕಿಮನೆ ಕೊಳವಾರ ಮನೆ ಹಾಗೂ ಕೊರ್ಗಿ ಮನೆಗಳನ್ನು ವೀಕ್ಷಿಸಿಲಾಗಿದ್ದು ಆಯಾ ಮನೆಗಳಲ್ಲಿ ಪ್ರಸ್ತುತ ಉಸ್ತುವಾರಿಯಲ್ಲಿರುವವರು ಮಾಹಿತಿ ನೀಡಿದರು.
ಐನ್‌ಮನೆ ಅಧ್ಯಯನ ಪ್ರವಾಸದಲ್ಲಿ ಅಕಾಡೆಮಿ ವತಿಯ ಅಧ್ಯಯನ ಪ್ರವಾಸ ಸಂಚಾಲಕರಾದ ಚಂದ್ರಶೇಖರ ಪೇರಾಲು, ಡಾ. ಎನ್.ಎ. ಜ್ಞಾನೇಶ್, ಹಾಗೂ ಅಕಾಡೆಮಿಯ ಸದಸ್ಯರಾದ ತೇಜಕುಮಾರ್ ಕೆ.ಆರ್, ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ, ಪಿ.ಎಸ್. ಕಾರ್ಯಪ್ಪ, ಸೂದನ ಎಸ್. ಈರಪ್ಪ, ಸಂದೀಪ್ ಪೂಳಕಂಡ, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಪೊನ್ನಚನ ಮೋಹನ್, ಕುದುಪಜೆ ಕೆ ಪ್ರಕಾಶ್ ಭಾಗವಹಿಸಿದ್ದರು.
ಪ್ರವಾಸದ ವೇಳೆ ಶ್ರೀ ನಿತ್ಯಾನಂದ ಮುಂಡೋಡಿ ಅವರು ಮನೆಗಳ ಮಾರ್ಗದರ್ಶನ ನೀಡಿದರೆ, ಐನ್‌ಮನೆಗಳ ಕುರಿತು ವಿಶೇಷ ಅಧ್ಯಯನ ನಡೆಸುತ್ತಿರುವ ಮಿಲನ ಭರತ್ ಕ್ಷೇತ್ರಕಾರ್ಯದಲ್ಲಿ ಹಾಗೂ ಪುಷ್ಪರಾಜ್ ಏನೇಕಲ್ಲು ದಾಖಲೀಕರಣದಲ್ಲಿ ಸಹಕರಿಸಿದರು
ಅರೆಭಾಷೆ ಅಕಾಡೆಮಿ ವತಿಯಿಂದ ಐನ್‌ಮನೆಗಳ ಅಧ್ಯಯನ ಪ್ರವಾಸ






























































