ಸುಳ್ಯದಿಂದ ಮಡಿಕೇರಿ ರಸ್ತೆ ಮಧ್ಯೆ ರಸಪಾಕ ಹೋಟೆಲ್ ಬಳಿಯಲ್ಲಿ ನಿರ್ಮಿಸಿರುವ ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಅರಂಬೂರು ಟರ್ಫ್ ಗ್ರೌಂಡ್ ಜು.11 ರಂದು ಉದ್ಘಾಟನೆಗೊಂಡಿತು.
ಶಾಸಕಿ ಭಾಗೀರಥಿ ಮುರಳ್ಯ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಸೂಡ ಅಧ್ಯಕ್ಷ ಮುಸ್ತಾಪ, ಕಾಯರತೋಡಿ ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ,ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ಹಿರಿಯ ಉದ್ಯಮಿಗಳಾದ
ಕೃಷ್ಣ ಕಾಮತ್ ಅರಂಬೂರು,ಹಮೀದ್ ಜನತಾ,ನಾರಾಯಣ ಕೇಕಡ್ಕ ಉಪಸ್ಥಿತರಿದ್ದರು.
ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.
ಪಾಲುದಾರರಾದ ಶರತ್ ಅರಂಬೂರು ಹಾಗೂ ಇತರರು ಹಾಜರಿದ್ದರು. ಮತ್ತು ಟೀಮ್ ಸಾಜ್ ಸ್ಪೋರ್ಟ್ಸ್ ನ ಶರತ್ ಅರಂಬೂರು ರವರ ನೇತೃತ್ವದಲ್ಲಿ ಸುಳ್ಯದಲ್ಲಿ ಪ್ರಥಮ ಬಾರಿಗೆ ನಿರ್ಮಿಸಿದ ಟರ್ಫ್ ಗೌಂಡ್ ಸುಳ್ಯ ತಾಲೂಕಿಗೆ ಹೊಸತೊಂದು ಕೊಡುಗೆಯಾಗಿದೆ.
ಸುಮಾರು 9 ಸಾವಿರ ಚದರ ಅಡಿಯ ಮೈದಾನದಲ್ಲಿ ಫುಟ್ ಬಾಲ್,ಕ್ರಿಕೆಟ್ ಪಂದ್ಯಾಟವನ್ನು ಆಡಲು ಅವಕಾಶ ನೀಡಲಾಗುವುದು. ಕ್ರೀಡಾಸಕ್ತರಿಗೆ ಮುಕ್ತ ಅವಕಾಶವಿದ್ದು ಬೆಳಗ್ಗೆ ಗಂಟೆ 6.00 ರಿಂದ ರಾತ್ರಿ 11.30 ರ ತನಕ ಆಟವಾಡಲು ಅವಕಾಶವಿದೆ. ವಿದ್ಯಾರ್ಥಿಗಳಿಗೆ ನುರಿತ ತರಬೇತುದಾರರಿಂದ ಕೋಚಿಂಗ್ ನೀಡುವ ವ್ಯವಸ್ಥೆ ಇರುವುದು.ಕೆಫೆ ಹಾಗೂ ಸಾಜ್ ಸ್ಪೋರ್ಟ್ಸ್ ವಸ್ತುಗಳ ಸಂಗ್ರಹದ ಮಳಿಗೆಯು ಇರುವುದು. ವಾಹನ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು. ಸಂಘ ಸಂಸ್ಥೆಗಳ ಸದಸ್ಯರಿಗೆ, ಇಲಾಖೆಯ ಸಿಬ್ಬಂದಿಗಳಿಗೆ, ವಿದ್ಯಾರ್ಥಿಗಳಿಗೆ ಸಮಯಕ್ಕಾನುಸಾರವಾಗಿ ಮೊದಲು ನೋಂದಾವಣೆ ಮಾಡಿದ ತಂಡದವರಿಗೆ ಆದ್ಯತೆ ಮೇರೆಗೆ ಅವಕಾಶ ಒದಗಿಸಿಕೊಡಲಾಗುವುದು. ರಾತ್ರಿ ಆಟವಾಡಲು ಯಾವುದೇ ರೀತಿಯ ಅಡ್ಡಿಯಾಗದಂತೆ ಆಕರ್ಷಕ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕ್ರೀಡಾ ಪ್ರಿಯರಿಗೆ ಮುಕ್ತ ಅವಕಾಶವಿರುವುದಾಗಿ ಪಾಲುದಾರರು ತಿಳಿಸಿದ್ದಾರೆ.
ಅರಂಬೂರು : ಟರ್ಫ್ ಗ್ರೌಂಡ್ ಲೋಕಾರ್ಪಣೆ

































































