ಸುಳ್ಯ ಕಸಬಾ ಬೆಟ್ಟಂಪಾಡಿ ನಿವಾಸಿ ಚಿತ್ರಕಲಾವಿದೆ ಪೂಜಾ ಬೋರ್ಕರ್ ರರಿಗೆ ದಿನಾಂಕ 19-07-2026 ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ದಲ್ಲಿ ಶ್ರೀ ಶಿವಪ್ರಕಾಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈಗಾಗಲೇ “IBR Achiever” ಪಟ್ಟಿಯನ್ನು ಹಾಗೂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯನ್ನು ನಿರ್ಮಿಸಿರುವ ಇವರು ಬೆಟ್ಟಂಪಾಡಿ ದಿ| ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಯ ಪುತ್ರಿ, ಮನೋಜ್ ಆನಡ್ಕ ಇವರ ಪತ್ನಿ.
ಪೂಜಾ ಬೋರ್ಕರ್ ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಅಡ್ಪಂಗಾಯ ಇವರ ವತಿಯಿಂದ ಸನ್ಮಾನ





































































