ಸುಳ್ಯ ಸಮಸ್ತ ಸಂಯುಕ್ತ ಜಮಾಅತ್ ವಿಶೇಷ ಸಭೆ,ಸಂಯುಕ್ತ ಖಾಝಿ ಸ್ವೀಕಾರ ಯಶಸ್ವಿಗೆ ಉಪ ಸಮಿತಿಗಳ ರಚನೆ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಖಾಝಿಯಾಗಿ ಸಯ್ಯದುಲ್ ಉಲಮಾ ಬಹು| ಜಿಫ್ರಿ ಮುತ್ತುಕೋಯ ತಂಘಳ್ ರವರನ್ನು ನೇಮಿಸಿದ್ದು, ಖಾಝಿ ಸ್ವೀಕಾರ ಸಮಾರಂಭವನ್ನು ಆ.4 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲು ಜು.17 ರಂದು ನಡೆದ ಸಮಸ್ತ ಸಂಯುಕ್ತ ಜಮಾಅತ್ ನ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಮಸ್ತ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ವಹಿಸಿದರು. ಸಮಾರಂಭಕ್ಕೆ ಸಯ್ಯದ್ ಅಲಿ ತಂಗಳ್ ಕುಂಬೋಲ್, ಝೈನುಲ್ ಆಬಿದೀನ್ ತಂಘಳ್ ದುಗ್ಗಲಡ್ಕ, ಅಹ್ಮದ್ ಪೊಕೋಯ ತಂಘಳ್ ಪುತ್ತೂರು, ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲ ಫೈಝಿ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ಪುತ್ತೂರು, ತೋಡಾರು ಉಸ್ಮಾನ್ ಫೈಝಿ ಹಾಗೂ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಇವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಅಲ್ಲದೆ ಕಾರ್ಯಕ್ರಮದ ಯಶಸ್ವಿಗೆ ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ, ತಾಜ್ ಮೊಹ್ಮದ್ ಸಂಪಾಜೆ, ಹೆಚ್. ಎ ಅಬ್ಬಾಸ್ ಸೆಂಟ್ಯಾರ್, ಅಬೂಬಕ್ಕರ್ ಹಾಜಿ ಮಂಗಳ, ಜಮಾಲ್ ಬೆಳ್ಳಾರೆ, ಅಶ್ರಫ್ ಗುಂಡಿ, ಪಳ್ಳಿಕ್ಕೆರೆ ಅಬ್ದುಲ್ಲ ಹಾಜಿ ಅಜ್ಜಾವರ ಮತ್ತು ಅಬೂಬಕ್ಕರ್ ಪೋಪಿರವರ ಸಂಚಾಲಕತ್ವದ ವಿವಿಧ ಸಮಿತಿಗಳನ್ನುರಚಿಸಿ ಸದಸ್ಯರನ್ನು ನೇಮಿಸಲಾಯಿತು. ಸಭೆಯಲ್ಲಿ ವಿವಿಧ ಮಸೀದಿ ಅಧ್ಯಕ್ಷರು, ಪಧಾಧಿಕಾರಿಗಳು, ಸಮಸ್ತ ಸಂಯುಕ್ತ ಜಮಾಅತ್ ನ ಸದಸ್ಯರು ಭಾಗವಹಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು. ಅಬೂಬಕ್ಕರ್ ಪೋಪಿ ವಂದಿಸಿದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top