ಮರ್ಕಂಜ : ನಾಪತ್ತೆಯಾದ ಬಾಲಕಿ ಯುವಕನೊಂದಿಗೆ ಪತ್ತೆ!

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಿಂದ ಸುಮಾರು ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಕೊಡಗು ಜಿಲ್ಲೆಯಲ್ಲಿ ಯುವಕನೊಂದಿಗೆ ಪತ್ತೆಯಾಗಿದ್ದಾಳೆ
ನಾಪತ್ತೆಯಾಗಿದ್ದ ಯುವತಿಯನ್ನು ಸುಳ್ಯ ಪೊಲೀಸರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶೆಟ್ರಳ್ಳಿ ಗ್ರಾಮದಲ್ಲಿ ಜುಲೈ 22ರಂದು ಪತ್ತೆ ಹಚ್ಚಿದ್ದಾರೆ.
ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಸುಳ್ಯ ಪೊಲೀಸ್‌ ಠಾಣೆಗೆ ತಂದು,ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಯುವಕನ ಮೇಲೆ ಪೋಕ್ಸ ಪ್ರಕರಣ, ಹಾಗೂ ಸೆಕ್ಸನ್ ಗಳ ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಯುವತಿ ಕಾಣೆಯಾಗಿದ್ದ ಬಗ್ಗೆ ಮನೆಯವರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಮೇ 5 ರಂದು ನಾಪತ್ತೆ ದೂರು ನೀಡಿದ್ದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top