ವಿಧ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ. ಅಯೋಧ್ಯೆ ಖಜಾನೆ ಲೂಟಿ .ಗ್ರಾಮದ ರಸ್ತೆ ಕಳಪೆ ಕಾಮಗಾರಿಯ ವಿರುದ್ಧ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದಲ್ಲಿ ಪ್ರತಿಭಟನಾ ನಿರತ ವಿಧ್ಯಾರ್ಥಿಗಳ ಮಾರಣಾಂತಿಕ ಮೇಲೆ ಪೆಲೆಟ್ ಗನ್ ಬಳಕೆ ಮತ್ತು ಅಯೋಧ್ಯೆಯ ರಾಮಮಂದಿರದ ಖಜಾನೆ ಕಳವು ಮಾಡಿ ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದು ಇದರ ತನಿಖೆಗೆ ಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕು ಮತ್ತು ಸಂಪಾಜೆ ಗ್ರಾಮಸಭೆಯಲ್ಲಿ ಉಲ್ಲೇಖಿಸಲ್ಪಟ್ಟ ಗ್ರಾಮದ ರಸ್ತೆಯ ಕಳಪೆ ಕಾಮಗಾರಿಯ ವಿಷಯದಲ್ಲಿ ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ವಲಯ ಕಾಂಗ್ರೆಸ್ ಸಂಪಾಜೆ ವತಿಯಿಂದ ಸಂಪಾಜೆ ಗ್ರಾಮಪಂಚಾಯತ್ ಕಛೇರಿಯ ಮುಂಬಾಗದಲ್ಲಿ ಪ್ರತಿಭಟನೆ ನಡೆಯಿತು.



































































































































ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಪತ್ರ ನೀಡುವ ಕಾರ್ಯಕ್ರಮ ಇಂದು ನಡೆಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮುತ್ತುಮಾರಿಯಮ್ಮ ದೇವಸ್ತಾನದ ಅಧ್ಯಕ್ಷರಾದ ಶ್ರೀ ಜ್ಞಾನಶೀಲನ್ ರಾಜು ರವರು ಅಯೋಧ್ಯೆ ರಾಮ ಮಂದಿರ ಬಹುಸಂಖ್ಯಾತ ಹಿಂದೂಗಳ ಶ್ರಧ್ಧಾ ಕೇಂದ್ರವಾಗಿದ್ದು ಇಲ್ಲಿ ಖಜಾನೆಯ ಲೂಟಿ ನಡೆದಿರುವುದು ಮಾದ್ಯಮಗಳ ಮೂಲಕ ತಿಳಿದು ನಿಜವಾಗಿಯೂ ಆಘಾತವಾಯಿತು .ಈ ಕಳ್ಳತನದ ತನಿಖೆ ನಡೆಸಲು ಸಾಮಾನ್ಯ ಎಸ್.ಐ.ಟಿ. ರಚಿಸಿದ್ದು .ಇದು ಸರಿಯಲ್ಲ ಇಷ್ಟುದೊಡ್ಡ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜ್ ಒಬ್ಬರ ನೇತೃತ್ವದಲ್ಲಿ ತಂಡ ರಚಿಸಿ ಅದರ ನೇತೃತ್ವದಲ್ಲಿ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಬದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯಸಂಯೋಜಕರಾದ ಜಾನಿ.ಕೆ
ಪಿ ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ ದೇಶಾಧ್ಯಂತ ವಿಧ್ಯಾರ್ಥಿಗಳ ಹೋರಾಟ ನಡೆದಿದ್ದು ಮಾತ್ರವಲ್ಲ 22 ಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶವನ್ನೇ ಬಿಚ್ಚಿಬೀಳಿಸುವಂತಹಾ ಸುದ್ಧಿಯಾಗಿತ್ತು.

ಆದರೆ ಇಂತಹಾ ಸಂದರ್ಭದಲ್ಲೇ ಕೇಂದ್ರ ಸರಕಾರ ನಾಳಿನ ಭವಿಷ್ಯವಾಗಬೇಕಿದ್ದ ವಿಧ್ಯಾರ್ಥಿಗಳ ವಿರುದ್ಧ ಪ್ರಾಣಿಗಳನ್ನು ಬೇಟೆಯಾಡಲು ಬಳಸುವಂತಹಾ ಮಾರಣಾಂತಿಕ ಪೆಲೆಟ್ ಗನ್ ಬಳಸಿರುವುದು ಬೆಳಕಿಗೆ ಬಂದಿದೆ.

ಇದು ಕೇಂದ್ರ ಸರಕಾರದ ಕಿರಾತಕ ನಡೆಯನ್ನು ತರೆದಿಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಸರಕಾರ ಪ್ರತಿಭಟನಾ ನಿರತ ಪ್ರಜೆಗಳೊಂದಿಗೆ ತಾಯಿ ಹೃದಯದೊಂದಿಗೆ ವ್ಯವಹರಿಸಬೇಕಿತ್ತು. ಆದರೆ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹಾಗೇ ವರ್ತಿಸದೆ ಆರಂಭದಿಂದಲೇ ಪ್ರತಿಭಟನಾ ನಿರತ ವಿಧ್ಯಾರ್ಥಿಗಳನ್ನು ದೇಶದ್ರೋಹಿಗಳು ,ತುಕಡೇ ತುಕಡೇ ಗ್ಯಾಂಗ್ ಅಂತೆಲ್ಲಾ ಹೀಗಳೆದು ಎಷ್ಟು ಅವಹೇಳಿಸಲು ಸಾದ್ಯವೋ ಅಷ್ಟೆಲ್ಲಾ ಅವಮಾನಿಸಲಾಯಿತು. ಮಾತ್ರವಲ್ಲ ಪ್ರತಿಭಟನಾ ನಿರತ ವಿಧ್ಯಾರ್ಥಿಗಳ ಮೇಲೆ ಲಾಠಿಗೆ ಮೊಳೆಗಳನ್ನು ಸಿಕ್ಕಿಸಿ ಮತ್ತು ಮಾರಣಾಂತಿಕ ಪೆಲೆಟ್ ಗನ್ ಬಳಕೆ ಮಾಟಿದ್ದು ಅಮಾನವೀಯ ನಡೆಯಾಗಿರುತ್ತದೆ.

ಇದಕ್ಕಾಗಿ ಪ್ರದಾನಿ ನರೇಂದ್ರ ಮೋದಿಯವರು ದೇಶದ ಜನರ ಕ್ಷಮೆ ಕೇಳೋದಲ್ಲದೆ ಗ್ರಹಸಚಿವ ಅಮಿತ್ ಶಾರವರ ರಾಜಿನಾಮೆಯನ್ನು ಪಡೆಯಬೇಕು ಎಂದು ಒತ್ತಾಯಿಸಿದರು. ಮತ್ತು ಸಂಪಾಜೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಉಲ್ಲೇಖಿಸಲ್ಪಟ್ಟ ಗ್ರಾಮದ ಕೆಲವು ರಸ್ತೆಗಳ ಕಾಮಗಾರಿ ಕಳಪೆ ಎನ್ನುವ ಮಾತುಗಳು ಕೇಳಿಬಂದಿರುತ್ತದೆ. ಇದರ ಬಗ್ಗೆ ಲೋಕಾಯುಕ್ತದ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶ್ರೀ ಮಹಮ್ಮದ್ ಕುಂಞಿ ಗೂನಡ್ಕ ಮಾತನಾಡಿ ವಿಧ್ಯಾರ್ಥಿಗಳ ವಿರುದ್ಧದ ಕೇಂದ್ರ ಸರಕಾರದ ನಿಲುವನ್ನು ಖಂಡಿಸಿದರು .

ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾದ ಶ್ರೀ ವಸಂತ ಪೆಲ್ತಡ್ಕ ಇವರು ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲನಾ ಕೆ.ಆರ್. ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಪ್ರಮಿಳಾ ಪೆಲ್ತಡ್ಕ , ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅಬೂಸಾಲಿ ಗೂನಡ್ಕ ,ಮಾಜೀ ಗ್ರಾ.ಪಂಚಾಯತ್ ಸದಸ್ಯರಾದ ಬೆಂಜಮಿನ್ ಡಿಸೋಜ, ಮುತ್ತುಮಾರಿಯಮ್ಮ ದೇವಸ್ಥಾನದ ಆಢಳಿತ ಮೊಕ್ತೇಸರರಾದ ಶ್ರೀ ಪಳನಿವೇಲು, ಕಾರ್ಮಿಕ ನಾಯಕರಾದ ನಾಗಮತ್ತು ನೆಲ್ಲಿಕುಮೇರಿ, ಫಿಲೋಮಿನಾ ಕ್ರಾಸ್ತ , ಮಹಮ್ಮದ್ ಕುಂಞಿ (ಉಪ್ಪಿ) ಸಂಪಾಜೆ ,ಮತ್ತಿತರರು ಉಪಸ್ತಿತರಿದ್ದರು. ಸಂಪಾಜೆ ವಲಯ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟರು.

ಕೊನೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ವೋಲ್ಗಾ ಡಿಸೋಜ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.

Leave a Comment

Your email address will not be published. Required fields are marked *

error: Content is protected !!
Scroll to Top