ಅಡ್ತಲೆ: ಚಂದನ ಯುವತಿ ಮಂಡಲ ಅಡ್ತಲೆ ಹಾಗೂ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆಟಿ ಕೂಟವು ಸಡಗರ ಹಾಗೂ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಅರಂತೋಡು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಕೇಶವ ಅಡ್ತಲೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಚಂದನ ಯುವತಿ ಮಂಡಲದ ಅಧ್ಯಕ್ಷೆ ಸರಸ್ವತಿ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಬೊಮ್ಮಕ್ಕ ಪಿಂಡಿಮನೆ ಅವರು ಆಟಿ ತಿಂಗಳ ವಿಶೇಷತೆ, ಆಚರಣೆಗಳು ಹಾಗೂ ಹಿಂದಿನ ಕಾಲದ ಜೀವನ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಅಡ್ತಲೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಲೋಹಿತ್ ಮೇಲಡ್ತಲೆ ಶುಭಹಾರೈಸಿದರು.
ನಾಗರಿಕ ಹಿತರಕ್ಷಣಾ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಹಾಗೂ ಚಂದನ ಯುವತಿ ಮಂಡಲದ ಅಧ್ಯಕ್ಷರಾದ ಸರಸ್ವತಿ ಅಡ್ತಲೆ,ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ ಬೆದ್ರುಪಣೆ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಯಾನಾ ಬೆದ್ರುಪಣೆ ಪ್ರಾರ್ಥನೆ ನೆರವೇರಿಸಿದರು. ರೇಖಾ ಪಾನತ್ತಿಲ ಸ್ವಾಗತಿಸಿದರು. ಅಶ್ವಿನಿ ಪಿಂಡಿಮನೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಆಟಿ ಸಂಭ್ರಮಕ್ಕೆ ಮೆರುಗು ನೀಡುವಂತೆ ಚೆನ್ನೆಮಣೆ ಆಟ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಚಂದನ ಯುವತಿ ಮಂಡಲದ ಸದಸ್ಯರು ಆಟಿ ತಿಂಗಳ ವಿಶೇಷವಾದ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ತಂದಿದ್ದು, ಎಲ್ಲರೂ ಒಟ್ಟಾಗಿ ಸವಿಯುವ ಮೂಲಕ ಆಟಿ ಕೂಟದ ಸಂಭ್ರಮವನ್ನು ಹಂಚಿಕೊಂಡರು.
ಸಾಂಪ್ರದಾಯಿಕ ಆಚರಣೆ, ಆಟ-ಮನರಂಜನೆ ಹಾಗೂ ಆಟಿ ವಿಶೇಷ ಖಾದ್ಯಗಳ ಸವಿಯೂಟದೊಂದಿಗೆ ನಡೆದ ಕಾರ್ಯಕ್ರಮವು ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ನೆನಪಿಸುವ ಅರ್ಥಪೂರ್ಣ ಕೂಟವಾಗಿ ಮೂಡಿಬಂತು.
ಅಡ್ತಲೆಯಲ್ಲಿ ಸಡಗರದ ಆಟಿ ಕೂಟಆಟಿ ಸಂಸ್ಕೃತಿ–ಸಂಪ್ರದಾಯಗಳ ಮೆಲುಕು; ವಿವಿಧ ಖಾದ್ಯಗಳ ಸವಿಯೂಟ, ಚೆನ್ನೆಮಣೆ ಆಟ













