ಹತ್ತಿ ಕಾಯಿಯಲ್ಲೆ  ಮೊಳಕೆ ಬಂದ ಮರಿಗಿಡಗಳು ನೋಡಲು ಬಲು ಸೊಬಗು ! 

ನಾವು ನಮ್ಮ ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ಬೆಳೆಸುತ್ತೇವೆ ಪ್ರಕೃತಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಅಲ್ಲವೇ ? ಭೂಮಿಗೆ ಬಿದ್ದ ಹಣ್ಣು ಭೂಮಿಗೆ ಬಿದ್ದ ಬೀಜ ಎಂದು ವ್ಯರ್ಥವಾಗುವುದಿಲ್ಲ ಎಂಬ ಮಾತು ಎಷ್ಟು ಸತ್ಯ. ನಾವು ಇಂದು ಬೀಜ ಹಾಕಿ ಸಸಿ ಮಾಡಲು ನಾನಾ ವಿಧಾನಗಳನ್ನು ಅಳವಡಿಸುತ್ತೇವೆ. ಪ್ರಾರಂಭದಲ್ಲಿ ಏರುಮಡಿ ಸಾಲು ತದನಂತರ ಓಣಿ ಗಳಲ್ಲಿ ಬೀಜ ಬಿತ್ತುತ್ತಿದ್ದರೆ ಇತ್ತೀಚೆಗೆ ಪೇಪರ್ ಗ್ಲಾಸ್, ಗೆರಟೆ, ಪ್ಲಾಸ್ಟಿಕ್ ಗ್ಲಾಸ್ತೆಂ,ಗಿನ ಸಿಪ್ಪೆ ಒಂದೇ ಎರಡೇ ಆದರೂ ಮೊಳಕೆ ಹೊಡೆದು ಗಿಡವಾಗುವುದು ಅಷ್ಟೇ. ಆದರೆ ಪ್ರಕೃತಿಯಲ್ಲಿ ಇತ್ತೀಚೆಗೆ ಮಳೆ ಸಾಧಾರಣವಾಗಿದ್ದರಿಂದ ಹತ್ತಿ ಕೋಡು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ.  ನೆಟ್ಟಣಿಗೆ ಮುಡ್ನೂರು  ಗ್ರಾಮದ ಪ್ರಗತಿಪರ ಕೃಷಿಕರಾದ ಕುಮಾರ್ ಪೆರ್ನಾಜೆ ತೋಟದಲ್ಲಿ ನೂರಾರು ಗಿಡಗಳು ಮೊಳಕೆ ಒಡೆದು ನೋಡುಗರ ಮನವನ್ನು ಗೆದ್ದಿದೆ ಯಾವ ರೀತಿಯಲ್ಲಿ ಜೋಡಿಸಿದೆ ಹೊರಭಾಗ ಗಟ್ಟಿಯಾಗಿದ್ದು ಒಳಭಾಗ ಮೆತ್ತನೆಯ ಹಾಸಿಗೆ ಹಾಸಿಗೆಯಂತೆ ಬೀಜಗಳನ್ನು ಪೋಣಿಸಿ ಮೊಳಕೆ ಒಡೆದು ಗಿಡವಾಗಿ ತದನಂತರ ಮಣ್ಣಿಗೆ  ವರ್ಗಾಯಿಸಲು   ಪ್ರಕೃತಿ  ಮಾಡಿದ  ಪರಿ ಸೋಜಿಗೆವೇ ಸರಿ ಏನಂತೀರಾ…?
✍️ *ಕುಮಾರ್ ಪೆರ್ನಾಜೆ ಪುತ್ತೂರು*
ಪೆರ್ನಾಜೆ ಮನೆ ಪೆರ್ನಾಜೆ ಪೋಸ್ಟ್
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 574223
ಮೋ:9480240643



















Leave a Comment

Your email address will not be published. Required fields are marked *

error: Content is protected !!
Scroll to Top