ಗೋಮೂತ್ರಕ್ಕೂ ಬಂತು ಬೇಡಿಕೆ !

ಹೈನುಗಾರಿಕೆಯಲ್ಲಿ ರೈತರು ಮತ್ತಷ್ಟು ಆದಾಯ ಪಡೆಯುವ ಉದ್ದೇಶದಿಂದ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋಮೂತ್ರ ಸಂಗ್ರಹಣೆ ಹಾಗೂ ಖರೀದಿಗೆ ಪೈಲಟ್ ಯೋಜನೆಯೊಂದನ್ನು ಆರಂಭಿಸಲಾಗಿದೆ. ಹೈನುಗಾರಿಕೆ ಕೈಗೊಂಡ ರೈತರಿಂದ ಪ್ರತಿ ಲೀಟರ್‌ಗೆ ₹10 ದರದಲ್ಲಿ ಗೋಮೂತ್ರ ಖರೀದಿಸಲಾಗುತ್ತಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೋ ಸಂರಕ್ಷಣೆ, ಸಾವಯವ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದ ಭಾಗವಾಗಿ ಈ ಉಪಕ್ರಮ ಆರಂಭಿಸಲಾಗಿದೆ. ಬುಲಂದ್‌ಶಹರ್‌ನ ಸ್ಯಾನಾ ಪ್ರದೇಶದ 15 ಗ್ರಾಮಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಯೋಜನೆಯಡಿ ಸಂಗ್ರಹಿಸಿದ ಗೋಮೂತ್ರವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಸಂಸ್ಕರಣೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ.ಇದರಿಂದವಹಾಲಿನಿಂದ ಮಾತ್ರ ಆದಾಯ ಪಡೆಯುತ್ತಿದ್ದ ಹೈನುಗಾರರಿಗೆ ಗೋಮೂತ್ರವೂ ಹೆಚ್ಚುವರಿ ಆದಾಯದ ಮೂಲವಾಗುವ ಸಾಧ್ಯತೆ ಇದೆ. ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ ಗ್ರಾಮೀಣ ಮಹಿಳೆಯರನ್ನು ಆರ್ಥಿಕ ಚಟುವಟಿಕೆಗೆ ಸಂಪರ್ಕಿಸುವುದು.ಪೈಲಟ್ ಯೋಜನೆಯಲ್ಲಿ ಸುಮಾರು 300 ಮಹಿಳೆಯರನ್ನು ಷೇರುದಾರರನ್ನಾಗಿ ಸೇರಿಸಲಾಗಿದೆ. ಯೋಜನೆ ಯಶಸ್ವಿಯಾದರೆ ಉತ್ತರ ಪ್ರದೇಶದ ಇತರ ಭಾಗಗಳಿಗೂ ಈ ಮಾದರಿಯನ್ನು ವಿಸ್ತರಿಸುವ ಉದ್ದೇಶವಿದೆ.
ಗೋ ಸಂರಕ್ಷಣೆಯ ಜೊತೆಗೆ ಸಾವಯವ ಕೃಷಿಗೆ ಅಗತ್ಯವಾಗುವ ಉತ್ಪನ್ನಗಳ ತಯಾರಿಕೆ ಹಾಗೂ ಗ್ರಾಮೀಣ ಮಟ್ಟದಲ್ಲಿ ಮೌಲ್ಯವರ್ಧನೆಗೆ ಈ ವ್ಯವಸ್ಥೆ ಸಹಕಾರಿಯಾಗಬಹುದು ಎಂದು ಯೋಜನೆಯ ಉದ್ದೇಶವನ್ನು ವಿವರಿಸಲಾಗಿದೆ. ಈ ಮೂಲಕ ಹೈನುಗಾರರಿಗೆ ಹಾಲಿನ ಜೊತೆಗೆ ಮತ್ತೊಂದು ಆದಾಯದ ಅವಕಾಶ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಸದ್ಯ ಇದು ಪೈಲಟ್ ಯೋಜನೆಯಾಗಿದ್ದು, ಅದರ ಫಲಿತಾಂಶವನ್ನು ಆಧರಿಸಿ ಮುಂದಿನ ಹಂತದಲ್ಲಿ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.



















Leave a Comment

Your email address will not be published. Required fields are marked *

error: Content is protected !!
Scroll to Top