ಸುಳ್ಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ|| ಡಿ ವೀರೆಂದ್ರ ಹೆಗ್ಗಡೆಯವರ ಆಶಯದಂತೆ “ನಮ್ಮ ಊರು ನಮ್ಮ ಶ್ರದ್ಧಾ ಕೇಂದ್ರ “ಸ್ವಚ್ಛತಾ ಸಪ್ತಾಹ” ಕಾರ್ಯಕ್ರಮವನ್ನು ಪ್ರತಿ ವರ್ಷ 2 ಬಾರಿ ಸ್ವಾತಂತ್ರೋತ್ಸವ ಹಾಗೂ ಮಕರ ಸಂಕ್ರಮಣರಂದು ಸುಳ್ಯ ತಾಲೂಕಿನಾದ್ಯಂತ ಅನೇಕ ದೇವಸ್ಥಾನ, ದೈವಸ್ಥಾನ, ಸರಕಾರಿ ಶಾಲಾ ಆವರಣ,ಭಜನಾ ಮಂದಿರಗಳ ಆವರಣ ಹಾಗೂ ಇತರೆ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅದೇ ರೀತಿ ದಿನಾಂಕ 10.08.2026 ದಿಂದ 14.08.2026ರವರೆಗೆ 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಒಟ್ಟು 71 ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.





















> ತಾಲೂಕಿನಾದ್ಯಂತ ಒಟ್ಟು 18 ದೇವಸ್ಥಾನ, 18 ದೈವಸ್ಥಾನಗಳ ಆವರಣ, 14 ಭಜನಾ ಮಂದಿರಗಳ ಆವರಣ,, 20 ಸರಕಾರಿ ಶಾಲಾ ಆವರಣ, 1 ಕೇರೆ ಆವರಣ ಸೇರಿದಂತೆ ಒಟ್ಟು 71 ಸ್ಥಳಗಳಲ್ಲಿ ಜನಜಾಗೃತಿ ವೇದಿಕೆಯ ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಭಜನಾ ಮಂದಿರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸಂಘದ ಸದಸ್ಯರು, ಶೌರ್ಯ ವಿಪತ್ತು ತಂಡದವರ ಸಹಕಾರದೊಂದಿಗೆ ವಲಯದ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಹಾಗೂ ಊರಿನ ಗ್ರಾಮಸ್ಥರು, ಸ್ಥಳಿಯ ಮತ್ತು ಶ್ರದ್ದಾ ಕೇಂದ್ರ ಪದಾಧಿಕಾರಿಗಳು ಸೇರಿ ಒಟ್ಟು 1,993 ಜನರು ಈ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಂಡರು.

Leave a Comment

Your email address will not be published. Required fields are marked *

error: Content is protected !!
Scroll to Top