ಕೊಡಗು ಸಂಪಾಜೆ ಶಾಲಾ ಬಳಿ ಫಾರ್ಚೂನರ್ ಕಾರು ರಸ್ತೆಯ ಬದಿಯ ಕಬ್ಬಿಣದ ತಡೆಗೋಡೆಗೆ ( ಡಿವೈಡರ್ ) ಗೆ ಗುದ್ದಿ ಅಪಘಾತವಾದ ಘಟನೆ ಆ.14 ರಂದು ರಾತ್ರಿ ಸಂಭವಿಸಿದೆ.
ಸುಳ್ಯದಿಂದ ಮಡಿಕೇರಿಯತ್ತ ಹೋಗುತ್ತಿದ್ದ ಫಾರ್ಕ್ಚುನರ್ ಕಾರು ಕೊಡಗು ಸಂಪಾಜೆ ಶಾಲಾ ಬಳಿ ತಲುಪುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಮಾಹಿತಿಯನ್ನು ತಿಳಿದ ಸಂಪಾಜೆ ತಾಜುದ್ದೀನ್ ಟರ್ಲಿ ಹಾಗೂ ರಚನ್ ಸುಳ್ಯಕೋಡಿ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.
ಸಂಪಾಜೆ : ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಜಖಂ














