ಕಸ್ತೂರಿ ರಂಗನ್ ವರದಿಯಲ್ಲಿ ಬಳ್ಪ ಗ್ರಾಮವು ಸೇರ್ಪಡೆಗೊಂಡಿದ್ದು ಈ ಹಿನ್ನಲೆಯಲ್ಲಿ ಬಳ್ಪ ಗ್ರಾಮವು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ ಪರಿಣಾಮ ಮುಂದೆ ಆಗುವ ಪರಿಣಾಮಗಳನ್ನು ಎದುರಿಸುವ ಬಗ್ಗೆ ಬೀದಿಗುಡ್ಡೆಯಲ್ಲಿ ಗ್ರಾಮಸ್ಥರ ಸಭೆ ನಡೆಯಿತು.
ಸಭೆಯಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಕೇಂದ್ರ ಪರಿಸರ ಸಚಿವಾಲಯದ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸುವುದು ಮತ್ತು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವುದೆಂದು ನಿರ್ಣಯಿಸಲಾಯಿತೆಂದು ಸಂಘಟಕರಾದ ಸುಬ್ರಹ್ಮಣ್ಯ ಕುಳ ತಿಳಿಸಿದರು.
ಈ ಸಂದರ್ಭದಲ್ಲಿ ಪಂಜ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಬಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್ ಮುನ್ನೂರು, ಮಾಜಿ ಸದಸ್ಯ ರಮಾನಂದ ಎಣ್ಣೆಮಜಲು, ಊರವರಾದ ಸದಾನಂದ ಕಾರ್ಜ, ಹರೀಶ್ ಕಾರ್ಜ, ಹರೀಶ್ ಕಲುಂಗುಡಿ, ಹರ್ಷಿತ್ ಕಾರ್ಜ, ಅಚ್ಯುತ ಆಲ್ಕಬೆ, ಅಭಿಲಾಷ್ ಕಟ್ಟ, ಹೊನ್ನಪ್ಪ ಎಂರ್ಬಿಲ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಕಸ್ತೂರಿ ರಂಗನ್ ವರದಿ ವಿರೊಧಿಸಿ ಬಳ್ಪ ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ
















