ಸುಳ್ಯ: ದೇವಚಳ್ಳ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣ ಸೇರಿದಂತೆ ಒಟ್ಟು ₹92 ಲಕ್ಷ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.
ಗ್ರಾಮದ ವಿವಿಧ ಭಾಗಗಳ ರಸ್ತೆ ಅಭಿವೃದ್ಧಿ ಮತ್ತು ಮೂಲಸೌಕರ್ಯ ಸುಧಾರಣೆಗೆ ಅನುದಾನ ಒದಗಿಸಲಾಗಿದ್ದು, ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಕಾಮಗಾರಿಗಳ ವಿವರ
ಮುಳಿಯಡ್ಕ–ವಾಲ್ತಾಜೆ ರಸ್ತೆ ಅಭಿವೃದ್ಧಿ – ₹5.50 ಲಕ್ಷ
ಹುರುಳಿಯಡ್ಕ–ಮಣಿಯೂರು–ಅಂಬೆಕಲ್ಲು ರಸ್ತೆ – ₹10 ಲಕ್ಷ
ಮಣಿಯೂರು–ಪರ್ಲೆಡಿ ರಸ್ತೆ – ₹10 ಲಕ್ಷ
ಅಡ್ಕನಪಾರೆ ಎಸ್‌ಸಿ ಕಾಲೋನಿ ರಸ್ತೆ – ₹10 ಲಕ್ಷ
ಎಲಿಮಲೆ–ಕಲ್ಲಪಣೆ ರಸ್ತೆ – ₹5.50 ಲಕ್ಷ
ಕುಚ್ಚಾಲ–ಮೆದು ರಸ್ತೆ – ₹5.50 ಲಕ್ಷ
ಅಚ್ರಾಪ್ಪಾಡಿ ರಸ್ತೆ – ₹5.50 ಲಕ್ಷ
ಕರಂಗಲ್ಲು ರಸ್ತೆ ತಡೆಗೋಡೆ ನಿರ್ಮಾಣ – ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಧಿಯಿಂದ ₹10 ಲಕ್ಷ
ಕಂದ್ರಪ್ಪಾಡಿ–ವಾಲ್ತಾಜೆ ರಸ್ತೆ ತಡೆಗೋಡೆ ನಿರ್ಮಾಣ – ₹10 ಲಕ್ಷ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹೆಚ್ಚುವರಿ ₹5 ಲಕ್ಷ, ಒಟ್ಟು ₹15 ಲಕ್ಷ
ಮುಳಿಯಡ್ಕ ಎಸ್‌ಸಿ ಕಾಲೋನಿ ರಸ್ತೆ ಅಭಿವೃದ್ಧಿ – ₹15 ಲಕ್ಷ
ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಕ್ಯಾಂಪ್ಕೋ ನಿರ್ದೇಶಕ ಎ.ವಿ. ತೀರ್ಥರಾಮ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ ಕಂಜಿಪಿಲಿ, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಶಕ್ತಿಕೇಂದ್ರ ಪ್ರಮುಖ ದಿವಾಕರ ಮುಂಡೋಡಿ, ಬೂತ್ ಸಮಿತಿ ಪ್ರಮುಖರು, ಪಕ್ಷದ ಹಿರಿಯ ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಹಾಗೂ ಸಂಬಂಧಿತ ರಸ್ತೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.
ದೇವಚಳ್ಳ ಗ್ರಾಮದಲ್ಲಿ ರೂ 92 ಲಕ್ಷದ ವಿವಿಧ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿಪೂಜೆ











