ಅರಂತೋಡು ಸಂಭ್ರಮದ ಈದ್ ಮಿಲಾದ್ ಆಚರಣೆ

ಅರಂತೋಡು ಬದ್ರಿಯಾ ಜುಮಾ ಮಸೀದಿ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ವತಿಯಿಂದ ಹಮ್ಮಿಕೊಳ್ಳಲಾದ ಈದ್ ಮಿಲಾದ್ ಸಮಾರಂಭದಲ್ಲಿ ಮಸೀದಿ ಖತೀಬ್ ಆಸಿಫ್ ಅಝ್ ಹರಿ ಈದ್ ಸಂದೇಶ ನೀಡಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ದ್ವಜಾರೋಹಣ ನೆರವೇರಿಸಿದರು. ಮಸೀದಿಯಲ್ಲಿ ಮೌಲೀದ್ ಮಜಿಲಿಸ್ ನಡೆಯಿತು. ಆ. 24 ರ ರಾತ್ರಿ ಮದ್ರಸ ವಿದ್ಯಾರ್ಥಿಗಳಿಂದ ನೆಬಿಯರ ಗುಣಗಾನ ಹಾಡು, ಬಾಷಣ, ಆಕರ್ಷಕ ದಫ್ ಪುಠಾಣಿ ಮಕ್ಕಳಿಂದ ಪ್ಲವರ್ ಶೋ ನಡೆಯಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಪುರ್ಕಾನ್ ತಂಡ ಪ್ರಥಮ ಸ್ಥಾನ ಪಡೆದರೆ ರಯ್ಯಾನ್ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಸಮಸ್ತ ವಾರ್ಷಿಕ ಪರೀಕ್ಷೆ, ಪಿ.ಯು.ಸಿ, ಎಸ್.ಎಸ್.ಎಲ್.ಸಿ ಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಖತೀಬ್ ಆಸಿಫ್ ಅಝ್ ಹರಿ, ಸದರ್ ರವೂಫ್ ಅಝ್ ಹರಿ, ಅಬ್ದುಲ್ ರಹಿಮಾನ್ ಝುಹರಿ ಉಸ್ತಾದ್ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಮ್, ಮಹಮ್ಮದ್ ಕಾರ್ಯದರ್ಶಿ ಕೆ.ಎಮ್ ಮೂಸಾನ್, ಕೋಶಾಧಿಕಾರಿ ಕೆ.ಎಮ್ ಅಬೂಬಕ್ಕರ್ ಪಾರೆಕ್ಕಲ್, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೊಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ, ಕಾರ್ಯದರ್ಶಿ ಪಸೀಲು, ಕೋಶಾಧಿಕಾರಿ ಸಂಶುದ್ಧೀನ್ ಪೆಲ್ತಡ್ಕ, ಉಪಾಧ್ಯಕ್ಪ ಹಾಜಿ ಅಝಾರುದ್ಧೀನ್ ನಿವೃತ್ತ ಉಪನ್ಯಾಸಕ ಎ. ಅಬುಲ್ಲ, ಹಾಜಿ ಅಬ್ದುಲ್ ಖಾದರ್ ಪಠೇಲ್, ಮೊಯಿದು ಕುಕ್ಕುಂಬಳ, ಎ.ಹನೀಫ್, ಮನ್ಸೂರ್ ಪಾರೆಕ್ಕಲ್, ಮುಜೀಬ್, ಹಾಜಿ ಬದುರುದ್ದೀನ್ ಪಠೇಲ್, ದುಬೈ ಸಮಿತಿಯ ಉಪಾಧ್ಯಕ್ಷ ಸೈಪುದ್ಧೀನ್ ಪಠೇಲ್, ಸೌದಿ ಸಮಿತಿ ಸದಸ್ಯ ಜಾವೇದ್ ಪೆಲ್ತಡ್ಕ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ಕಾರ್ಯದರ್ಶಿ ಸಂಶುದ್ಧೀನ್ ಕ್ಯೂರ್, ಸ್ವಲಾತ್ ಸಮಿತಿ ಅಧ್ಯಕ್ಷ ಕೆ.ಎಸ್ ಇಬ್ರಾಹಿಂ ಕುಕ್ಕುಂಬಳ, ಬೆಂಗಳೂರು ಉಧ್ಯಮಿ ಇಸ್ಮಾಯಿಲ್ ಕುಕ್ಕುಂಬಳ, ಟಿ.ಎಂ ಜಾವೇದ್ ತೆಕ್ಕಿಲ್, ಆಶಿಕ್ ಕುಕ್ಕುಂಬಳ, ಜವಾದ್ ಪಾರೆಕ್ಕಲ್ ಉಪಸ್ಥಿತರಿದ್ದರು. ತಾಜುದ್ದೀನ್ ಅರಂತೋಡು, ಕೆ.ಎಂ ಅನ್ವಾರ್ ಸೂಪಿ, ಇಸಾಕ್, ಆರಿಫ್, ಲತೀಫ್ ಮೊಟ್ಟೆಂಗಾರ್, ಸಮದ್ ಗುಂಡಿ, ನವಾಝ್ ಉದಯನಗರ ಮೊಹಿಸಿನ್, ಶಬಾಝ್ ಸಹಕರಿಸಿದರು.





























Leave a Comment

Your email address will not be published. Required fields are marked *

error: Content is protected !!
Scroll to Top