ಮುಂದಿನ ಪೀಳಿಗೆಗೆ ನಮ್ಮ ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಮಾಧವ ಗೌಡ

ನಮ್ಮ ಸಂಸ್ಕೃತಿ ಸಂಪ್ರದಾಯ ಗಳನ್ನು ಮುಂದಿನ ಪೀಳಿಗೆಗೆ ಕೊಡೋಯ್ಯುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮನೆಯಲ್ಲಿ ಮಾಡುವ ಎಲ್ಲ ಧಾರ್ಮಿಕ ಕಾರ್ಯಕ್ರಮ ದಲ್ಲಿ ಮಕ್ಕಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕು
ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಪರಿವಾರಕಾನ ಒಕ್ಕೂಟ , ಆರಂಬೂರು ಒಕ್ಕೂಟ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ಶ್ರೀ ಮೂಕಾಂಬಿಕಾ ಭಜನಾ ಮಂದಿರ ಆರಂಬೂರು ಇದರ ಸಂಯುಕ್ತ ಆಶ್ರಯ ದಲ್ಲಿ ಭಜನಾ ಮಂದಿರದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಷ್ಟ ಲಕ್ಷ್ಮಿಯರ ಬಗ್ಗೆ ಮಾಹಿತಿ ನೀಡುತ್ತ ವರಮಹಾಲಕ್ಷ್ಮಿ ತನ್ನೊಂದಿಗೆ ಅಷ್ಟ ಲಕ್ಷ್ಮಿಯರ ಪೂಜೆಯು ಆಗುತ್ತದೆ. ಈ ಪೂಜೆಯಿಂದ ಮನೆಯಲ್ಲಿ ಸುಖ,ಶಾಂತಿ, ಸಮೃದ್ಧಿ, ಶಾಂತಿ, ಸಂತಾನ ಅರೋಗ್ಯ ಭಾಗ್ಯ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗಬವಹಿಸಿದ ಜನಜಾಗೃತಿ ತಾಲ್ಲೂಕು ಅಧ್ಯಕ್ಷರಾದ ವೆಂಕಪ್ಪ ಗೌಡರು ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಕೃಷ್ಣ ಕಾಮತ್, ಭಜನಾ ಮಂದಿರ ಗೌರವಾದ್ಯಕ್ಷರಾದ ಶ್ರೀಪತಿ ಭಟ್, ಪದೋನ್ನಾತಿ ಪಡೆದು ವರ್ಗಾವಣೆ ಯಾದ ಕು. ದೀಕ್ಷಾ ನೆಡಿಚ್ಚಿಲ್ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ಸುಳ್ಯ ತಾಲ್ಲೂಕು ಮಾಸ್ಟರ್ ರದೀಶನ್
ಆರಂಬೂರ್ ಒಕ್ಕೂಟದ ಅಧ್ಯಕ್ಷರರಾದ ಚಂದ್ರಶೇಖರ ನೆಡಿಚ್ಚಿಲ್,ನೂತನ ಅಧ್ಯಕ್ಷರಾದ ಅಶೋಕ ಪೀಚೆ,
ಪರಿವಾಕನ ಒಕ್ಕೂಟ ಅಧ್ಯಕ್ಷರಾದ ಬಾಲಚಂದ್ರ,ನೂತನ ಅಧ್ಯಕ್ಷರಾದ ರತ್ನಾಕರ ರೈ ಆರಂಬೂರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸುರೇಶ್ ನಿರೂಪಿಸಿ ಮೇಲ್ವಿಚಾರಕರ ದಿನೇಶ್. ಡಿ ಸ್ವಾಗತಿಸಿ ಸೇವಾಪ್ರತಿನಿಧಿ ವಿಜಯಶ್ರೀ ವಂದಿಸಿದರು.
ಪೂಜಾ ಕಾರ್ಯಕ್ರಮ ವೈಧಿಕ ವಿಧಿವಿಧಾನವನ್ನು ಅಭಿರಾಮ್ ಭಟ್ ನೆರವೇರಿಸಿ ಕೊಟ್ಟರು.































Leave a Comment

Your email address will not be published. Required fields are marked *

error: Content is protected !!
Scroll to Top