ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಮೇಲಿನ ಅವ್ಯವಹಾರದ ಆರೋಪ ಸತ್ಯಕ್ಕೆ ದೂರವಾದುದು

ಸುಳ್ಯ : ಸುಳ್ಯ ಮತ್ತು ಕಡಬ ತಾಲೂಕಿನ ಸುಮಾರು 57 ಗ್ರಾಮಗಳ ಭಕ್ತರು ನಂಬಿಕೊಂಡು ಬರುವ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಅವರ ಮೇಲೆ ಅವ್ಯವಹಾರದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಲೋಕೇಶ್ ಅಕ್ರಿಕಟ್ಟೆ ಹೇಳಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮಿತಿಯು ಅತ್ಯಂತ ಒಳ್ಳೆಯ ಕೆಲಸಗಳು ಮಾಡಿಕೊಂಡು ಬರುತ್ತಿರುವ ಸಮಯದಲ್ಲಿ ಇದನ್ನು ಸಹಿಸಲಾರದ ಭಕ್ತರ ಹೆಸರಿನಲ್ಲಿ ಬಿಜೆಪಿ ಯವರು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಅವ್ಯವಹಾರದ ಆರೋಪಗಳನ್ನು ಹೊರಿಸಿ ದೇವಸ್ಥಾನದ ಅಧ್ಯಕ್ಷರಿಗೆ ಆಗೋಸ್ಟ್ 15ನೇ ತಾರೀಖಿನಂದು ಸಾರ್ವಜನಿಕ ಸಭೆ ಕರೆದು ಲೆಕ್ಕಪತ್ರ ಕೊಡಬೇಕೆಂದು 8 ಪ್ರಶ್ನೆಗಳನ್ನು ಮುಂದಿಟ್ಟು ಪತ್ರವೊಂದನ್ನು ಕೊಟ್ಟಿದ್ದರು.
ಯಾವುದೇ ಅವ್ಯವಹಾರಮಾಡದ ದೇವಸ್ಥಾನದ ಅಧ್ಯಕ್ಷರು ಖಂಡಿತಾ ಸಭೆ ಕರೆಯುತ್ತೇನೆಂದು ಹೇಳಿ ಅವರು ಹೇಳಿದ ದಿನ ಸಾರ್ವಜನಿಕ ಸಭೆ ಕರೆದು ಅವರು ಕೇಳಿದ 8 ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು.
ಆದರೆ ಪಂಜ ಗ್ರಾಮ ಪಂಚಾಯತ್‌ನಲ್ಲಿ ಭಾರೀ ಮೊತ್ತದ ಅವ್ಯವಹಾರ ನಡೆದಿದ್ದ ಕಾರಣ ಪಂಜದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಈ ಹಿಂದೆ ಬೃಹತ್ ಪ್ರತಿಭಟನೆ ಮಾಡಿದ್ದೇವು. ಆ ಸಂದರ್ಭದಲ್ಲಿ ಪಂಜ ಪಂಚಾಯತ್‌ನ ಪಿ.ಡಿ.ಓ ಮತ್ತು ಕಾರ್ಯದರ್ಶಿ ಎರಡೂ ಜನರನ್ನು ಜಿಲ್ಲಾ ಪಂಚಾಯತ್ ಸಿ.ಇ.ಓ ರವರು ಅಮಾನತು ಪಡಿಸಿದ್ದರು.
ಇದರಿಂದ ಪಂಜದ ಬಿಜೆಪಿ ಯವರಿಗೆ ಭಾರೀ ಮುಜುಗರ ಆಗಿತ್ತು ಮತ್ತು ಮಹೇಶ್ ಕುಮಾರ್ ಕರಿಕ್ಕಳರವರು ಕಲ್ಮಡ್ಕ ಪಂಚಾಯತಿನ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅತ್ಯಂತ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೆಚ್ಚಿನ ಅನುದಾನ ಸರಕಾರದಿಂದ ತಂದು ಅಭಿವೃದ್ಧಿ ಮಾಡಿರುತ್ತಾರೆ. ಮಾತ್ರವಲ್ಲದೆ ಪಂಬೆತ್ತಾಡಿ ಸೊಸೈಟಿಯ ಅಧ್ಯಕ್ಷರಾಗಿಯು ಒಳ್ಳೆಯ ಕೆಲಸ ಪೌ ಆ ಭಾಗದಲ್ಲಿ ಕಾಂಗ್ರೆಸ್ ಪಕ್ಷವು ಒಳ್ಳೆಯ ರೀತಿಯಲ್ಲಿ ಸಂಘಟನೆ ಆಗುತ್ತಿರುವುದನ್ನು ಕಂಡು ಬಿಜೆಪಿ ಯವರು ಸಹಿಸಲಾಗದೆ ಒಟ್ಟಾರೆಯಾಗಿ ಪಂಜ ದೇವಸ್ಥಾನವನ್ನು ಮುಂದಿಟ್ಟುಕೊಂಡು ಈ ಭಾಗದಲ್ಲಿ ಬಿಜೆಪಿಯವರು ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಮನವಿಯಲ್ಲಿ ಕೇಳಿದ 8 ಪ್ರಶ್ನೆಗಳ ಉತ್ತರವನ್ನು ಕೊಡುವ ಸಂದರ್ಭದಲ್ಲಿ ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಿ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸತೊಡಗಿದರು, ಮಾತ್ರವಲ್ಲದೇ ಬಿಜೆಪಿ ಕಾರ್ಯಕರ್ತ ಒಬ್ಬ ಎದ್ದು ನಿಂತು ಅಧ್ಯಕ್ಷರು ರಾಜೀನಾಮೆ ಕೊಡದಿದ್ದರೆ ನಾವು ಸೀಮೆಯ ಭಕ್ತರು ಯಾರೂ ಕೂಡ ಜಾತ್ರೋತ್ಸವಕ್ಕೆ ವಂತಿಗೆ ಕೊಡುವುದಿಲ್ಲ ಮತ್ತು ಸಹಕಾರ ನೀಡುವುದಿಲ್ಲ ಎಂದು ಹೇಳಿ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರ ನಡೆದು ದೇವಾಲಯದ ಧ್ವಜಸ್ತಂಭದ ಬಳಿ ಪ್ರಾರ್ಥನೆ ಮಾಡಿರುತ್ತಾರೆ.
ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನದ ಬಗ್ಗೆ ಸಮಾಜದಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುವಂತೆ ನಿರಂತರವಾಗಿ ಬರೆಯುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಅವರ ಆರೋಪಗಳ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿರುತ್ತಾರೆ ಮತ್ತು ದೇವರ ಜಳಕದ ಹೊಳೆಯಲ್ಲಿ ಸ್ನಾನ ಮಾಡಿ ಬಂದು ನಾನು ದೇವಸ್ಥಾನದ ಹಣವನ್ನು ಅವ್ಯವಹಾರ ಮಾಡಿಲ್ಲವೆಂದು ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆ ಪ್ರಮಾಣ ಮಾಡಿರುತ್ತಾರೆ.
ಈ ಹಿಂದೆ ಬಿಜೆಪಿ ಸರಕಾರದಿಂದ ನೇಮಕಗೊಂಡ ಆಡಳಿತ ಮಂಡಳಿಯು ರಥಕ್ಕೆ ಸಾಂಪ್ರದಾಯಿಕವಾಗಿ ಬೆತ್ತ ಬಳಸುವ ಬದಲು ಕಬ್ಬಿಣ ಬಳಸಿ ರಥವನ್ನು ವಿರೂಪಗೊಳಿಸಿದ್ದು ಮಾತ್ರವಲ್ಲದೆ ಗಂಭೀರವಾದ ಧಾರ್ಮಿಕ ಲೋಪವನ್ನು ಎಸಗಿದ್ದಾರೆ.
ಈ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಹಲವು ಭಕ್ತರು ಹಲವಾರು ಆರೋಪ ಹೊರಿಸಿ ಲೆಕ್ಕ ಪರಿಶೋಧನೆ ಮಾಡಿಸಬೇಕೆಂದು ಅರ್ಜಿ ಸಹ ಸಲ್ಲಿಸಿರುತ್ತಾರೆ.
ಈ ಹಿಂದಿನ ಆಡಳಿತ ಮಂಡಳಿಯಲ್ಲಿ ಕೆಲವೊಂದು ಸಂಶಯದ ವಿದ್ಯಾಮಾನ ನಡೆದಿದ್ದು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಸಂಶಯವಿದ್ದು ಭಕ್ತಾದಿಗಳಿಗೆ ಗೊಂದಲವಿರುತ್ತದೆ.
ಆದ್ದರಿಂದ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 2003-04 ಸಾಲಿನಿಂದ ಪ್ರಸ್ತುತವಿರುವ ಆಡಳಿತ ಮಂಡಳಿಯವರೆಗೆ ಸಂಪೂರ್ಣವಾಗಿ ಲೆಕ್ಕ ಪರಿಶೋಧನೆ ಮಾಡಿ ತನಿಖೆ ನಡೆಸಿ ಯಾವುದೇ ಲೋಪ ಇದ್ದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಸಹ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವು ಕೂಡ ದೇವಸ್ಥಾನದ ಅಧ್ಯಕ್ಷರ ಮುಖಾಂತರ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿರುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಂಜ ದೇವಳದ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ ಅವರು ಮಾತನಾಡಿ ದ.ಕ. ಜಿಲ್ಲಾ ಸುಳ್ಯ ತಾಲೂಕು ಕುತ್ಕುಂಜ ಗ್ರಾಮದಲ್ಲಿರುವ ಸದಾಶಿವ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ವ್ಯವಸ್ಥಾಪನ ದೇವಿಪ್ರಸಾದ್ ಕಾನತ್ತೂರ್ ರವರು, ದೇವಾಲಯದ ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿವೃದ್ಧಿಯ ಕಾರ್ಯವನ್ನು ಮಾಡುತ್ತಿದ್ದರೂ, ಸಮಾಜದ ಒಂದು ಗುಂಪು ದೇವಾಲಯದಲ್ಲಿ ಅವ್ಯವಹಾರ ಆಗಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದರಿಂದ ದೇವಾಲಯದ ಭಕ್ತಾದಿಗಳಾದ ನಮಗೆ ನೋವಾಗಿರುತ್ತದೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಸಮಾಜದ ಒಂದು ಗುಂಪು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ದೇವಾಲಯದ ಲೆಕ್ಕಪತ್ರವನ್ನು ಹಾಗೂ ಇತರ ವಿಷಯಗಳನ್ನು ಚರ್ಚಿಸುವ ಕುರಿತು ಕೂಡಲೇ ಸಭೆ ನಡೆಸಬೇಕೆಂದು ಮನವಿ ನೀಡಿದ ಬಗ್ಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಕೂಡಲೇ ಸ್ಪಂದಿಸಿ ಸಾರ್ವಜನಿಕ ಸಭೆ ಕರೆದು ಲೆಕ್ಕಪತ್ರ ಮತ್ತು ಇತರ ವಿಷಯಗಳನ್ನು ಸಭೆಯಲ್ಲಿ ಮಂಡಿಸಿದರೂ ವ್ಯವಸ್ಥಿತ ಗುಂಪು ಅಧ್ಯಕ್ಷರನ್ನು ಗುರಿಯಾಗಿಸಿಕೊಂಡು ಅಧ್ಯಕ್ಷರು ರಾಜೀನಾಮೆ ಕೊಡಲೇಬೇಕೆಂದು ಒತ್ತಾಯಿಸಿದ್ದು ಭಕ್ತಾದಿಗಳನ್ನು ಗೊಂದಲಕ್ಕೀಡು ಮಾಡಿರುತ್ತಾರೆ.

































ಕಳೆದ ಕೆಲ ವರ್ಷಗಳಲ್ಲಿ ಆಡಳಿತ ಮಂಡಳಿ ಕುರಿತಾಗಿ ಅಧ್ಯಕ್ಷರ ವರ್ಚಸ್ಸಿನಿಂದ ದೇವಾಲಯದ ಆದಾಯ ಗಣನೀಯವಾಗಿ ಹೆಚ್ಚಾಗಿದ್ದರೂ ವಿನಾ ಕಾರಣ ದೇವಾಲಯದಲ್ಲಿ ಅವ್ಯವಹಾರದ ಗುಮಾನಿಯೆಂದು ಗುಲ್ಲೆಬ್ಬಿಸಿ ದೇವಾಲಯದ ಆದಾಯಕ್ಕೆ ಕುಂದು ತರುವ ಪ್ರಯತ್ನ ಮಾಡಿರುವುದರಿಂದ ದೇವಾಲಯದ ಅಭಿವೃದ್ಧಿ ಕುಂಠಿತಗೊಳ್ಳುವ ಸಾಧ್ಯತೆಯಿರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಸದ್ರಿ ವ್ಯವಸ್ಥಿತ ಗುಂಪು ಊರ ಪರವೂರ ಭಕ್ತಾದಿಗಳಲ್ಲಿ ದೇವಾಲಯದ ಎಲ್ಲಾ ಲೆಕ್ಕ ಪತ್ರಗಳು ಸರಿ ಇಲ್ಲವೇಂದು ವ್ಯವಸ್ಥಿತವಾಗಿ ಪ್ರಚಾರ ಮಾಡಿರುವುದರಿಂದ ಮುಂದೆ ದೇವಾಲಯದ ಜಾತ್ರೆ, ಉತ್ಸವ ಮಾಡಲು ಹಾಗೂ ದೈನಂದಿನ ನಿರ್ವಹಣೆಯ ಬಗ್ಗೆ ಆರ್ಥಿಕ ತೊಂದರೆ ಉಂಟಾಗುವ ಸಾದ್ಯತೆ ಇರುತ್ತದೆ. ಅಲ್ಲದೆ ಈ ಹಿಂದಿನ ವ್ಯವಸ್ಥಾಪನಾ ಸಮಿತಿಯ ಸಮಯದಲ್ಲಿ ಅವ್ಯವಹಾರವಾಗಿದೆಯೆಂದು, ಕೆಲ ಸದಸ್ಯರು ರಾಜೀನಾಮೆ ನೀಡಿದ ಸನ್ನಿವೇಶಗಳು ಸಹ ನಡೆದಿದ್ದು ಸಮಯದಲ್ಲಿ ಕೂಡ ಅವ್ಯವಹಾರವಾಗಿದೆಯೆಂದು ಭಕ್ತಾದಿಗಳಲ್ಲಿ ಗೊಂದಲವಿರುತ್ತದೆ.
ಅಲ್ಲದೆ ಈ ಹಿಂದೆ ದೇವಸ್ಥಾನ ಪುನರ್-ನಿರ್ಮಾಣಕ್ಕೆ ಎರಡು-ಮೂರು ಬಾರಿ ಸಮಿತಿಯು ರಚನೆ ಆಗಿದ್ದು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ದೇಣಿಗೆ ಸಂಗ್ರಹ
ಮಾಡಿದ್ದು ಅವುಗಳ ಲೆಕ್ಕಪತ್ರಗಳ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರಲ್ಲಿ ಅವ್ಯವಹಾರ ಆಗಿದೆ ಎಂದು ಸಂಶಯ ವ್ಯಕ್ತಪಡಿಸಿರುವುದರಿಂದ ಸೀಮಾ ದೇವಸ್ಥಾನದ ಹಿತದೃಷ್ಟಿಯಿಂದ ದೇವಾಲಯದ ಲೆಕ್ಕಪತ್ರವನ್ನು ಕಳೆದ 2003-04 ಸಾಲಿನಿಂದ ಪ್ರಸ್ತುತ ಈಗಿನ ಆಡಳಿತ ಸಮಿತಿಯ ಅವಧಿಯವರೆಗೆ ಎಲ್ಲಾ ಲೆಕ್ಕ ಪತ್ರಗಳನ್ನು ಕೂಲಂಕಷವಾಗಿ ಇಲಾಖಾವತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮಗಳನ್ನು ಕೈಗೊಳ್ಳಬೆಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣನ ಬೊಳ್ಳೂರು,ಖಜಾಂಜಿ ರಜಿತ್ ಭಟ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top