ಪವಿತ್ರ ಶಿಲುಬೆಯ ಚರ್ಚ್ ಬೆಳ್ಳಾರೆಯಲ್ಲಿ ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆಯನ್ನು ( ಮೊಂತಿ ಫೆಸ್ತ್) ಅದ್ದೂರಿಯಾಗಿ ಆಚರಿಸಲಾಯಿತು.
ಹೂಗಳಿಂದ ಶೃಂಗರಿಸಿದ ಮೇರಿ ಮಾತೆಯ ಪ್ರತಿಮೆಯನ್ನು ಭಕ್ತಿ ಪೂರ್ವಕವಾಗಿ ಮೆರವಣಿಗೆಯಲ್ಲಿ ಚರ್ಚಿನ ದ್ವಾರದಿಂದ ಪವಿತ್ರ ಶಿಲುಬೆಯ ಚರ್ಚ್ ವರೆಗೆ ತರಲಾಯಿತು. ಧರ್ಮಗುರುಗಳಾದ ರೆ.ಫಾ. ಡಾ|| .ಆಂಟನಿ ಪ್ರಕಾಶ್ ಮೊಂತೆರೋ ರವರು ಹೊಸ ತೆನೆಗಳನ್ನು ಆಶೀರ್ವದಿಸಿದರು. ನಂತರ ಮಾತೆ ಮರಿಯಳ ಪ್ರತಿಮೆಗೆ ಮಕ್ಕಳು ಮತ್ತು ಹಿರಿಯರು ಹೂಗಳನ್ನು ಅರ್ಪಿಸಿದರು. ಬಳಿಕ ಪವಿತ್ರ ಶಿಲುಬೆಯ ಚರ್ಚ್ ನ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರಬಲಿ ಪೂಜೆ ಅರ್ಪಿಸಲಾಯಿತು. ಬಳಿಕ ಎಲ್ಲರೂ ಒಟ್ಟಿಗೆ ಸೇರಿ ಉಪಹಾರವನ್ನು ಸೇವಿಸಲಾಯಿತು..




















