ಆಲೆಟ್ಟಿ: ಐಸಿಎಆರ್–ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಆಲೆಟ್ಟಿ ಹಾಗೂ ಶ್ರೀ ಲಕ್ಷ್ಮೀ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಪರಿಶಿಷ್ಟ ಪಂಗಡದ ರೈತರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಟಿ.ಜೆ. ರಮೇಶ, ಐಸಿಎಆರ್–IIHRನ ಪ್ರಧಾನ ವಿಜ್ಞಾನಿ ಡಾ. ವಿ. ಶಂಕರ್, ಜಿಲ್ಲಾ ಯೋಜನಾ ನಿರ್ದೇಶಕ ಕೆ.ಇ. ಜಯರಾಮ್, ಸಂಜೀವಿನಿ ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಹಾಗೂ ಒಕ್ಕೂಟದ ಅಧ್ಯಕ್ಷೆ ಸುಷ್ಮಾ ಉಪಸ್ಥಿತರಿದ್ದರು.
ತರಬೇತಿಯಲ್ಲಿ ತೋಟಗಾರಿಕಾ ಬೆಳೆಗಳ ನಿರ್ವಹಣೆ, ರೋಗ ನಿಯಂತ್ರಣ, ಮಣ್ಣಿನ ಫಲವತ್ತತೆ, ಸಾವಯವ ಗೊಬ್ಬರಗಳ ಬಳಕೆ ಹಾಗೂ ಕೃಷಿ ಪರಿಕರಗಳ ಸಮರ್ಪಕ ಬಳಕೆಯ ಕುರಿತು ಮಾಹಿತಿ ನೀಡಲಾಯಿತು. ಬಾಳೆ ದಿಂಡಿನ ಮೌಲ್ಯವರ್ಧನೆ ಸೇರಿದಂತೆ ವಿವಿಧ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಸಮಗ್ರ ಕೃಷಿಕರಾದ ವಿನೋದ್ ಮೂಡಗದ್ದೆ, ನವೀನ್ ಚಾತುಬಾಯಿ, ವಿಮಾಲಾಕ್ಷಿ ರಮೇಶ್, ಜಯಲಕ್ಷ್ಮೀ ದಯಾನಂದ, ಕಾರ್ಯದರ್ಶಿ ಸರೋಜಿನಿ, ಎಂ.ಬಿ.ಕೆ. ರೇಣುಕಾ, ಎಲ್ಸಿಆರ್ಪಿಗಳಾದ ಲೀಲಾವತಿ, ಭಾರತಿ, ಪಶುಸಖಿ ಸರೋಜಿನಿ ಹಾಗೂ ಕೃಷಿಸಖಿಯರಾದ ಪುಷ್ಪಲತಾ ಮಡಪ್ಪಾಡಿ, ಪೂರ್ಣಿಮಾ ಅಜ್ಜಾವರ, ಲೋಚನಾ ಆಲೆಟ್ಟಿ, ವಸಂತಿ ಅರಂತೋಡು, ಅನಿತಾ ಮರ್ಕಂಜ, ಮೋಹಿನಿ ವಿಶ್ವನಾಥ್ (ನಿಶಾ) ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಡ್ಡಡ್ಕ, ಆಲೆಟ್ಟಿ, ಕೂರ್ನಡ್ಕ, ತಲೆಪಲ್ಲ ಹಾಗೂ ರಂಗತ್ತಮಲೆ ಭಾಗದ ರೈತರು, ಮಹಿಳೆಯರು ಮತ್ತು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.
ಆಲೆಟ್ಪಿ : ಪರಿಶಿಷ್ಟ ಪಂಗಡದ ರೈತರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮ




















