ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ 8 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಅಡ್ತಲೆ ಶಾಲಾ ವಠಾರದಲ್ಲಿ ಸೆಪ್ಟೆಂಬರ್ 13 ನೇ ಆದಿತ್ಯವಾರ ನಡೆಯಲಿದೆ. ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆಗೊಂಡು ಪುಟಾಣಿಗಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಿರಿಯ ನಾಗರಿಕರಿಗೆ ಮತ್ತು ದಂಪತಿಗಳಿಗೆ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿವೆ. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕಿಶೋರ್ ಕುಮಾರ್ ಕಿರ್ಲಾಯ ಇವರಿಗೆ ಸನ್ಮಾನ ನಡೆಯಲಿದೆ. ಊರಿನ ಎಲ್ಲಾ ಸಾರ್ವಜನಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸ್ಪಂದನ ಗೆಳೆಯರ ಬಳಗದ ಮಾಧ್ಯಮ ಪ್ರಕಟಣೆ ತಿಳಿಸಿದೆ.
ನಾಳೆ ಸ್ಪಂದನ ಗೆಳೆಯರ ಬಳಗದ ವತಿಯಿಂದ ಸೆಪ್ಟೆಂಬರ್ 13 ರಂದು ಅಡ್ತಲೆಯಲ್ಲಿ ಸಂಭ್ರಮದ 8 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

























