ಸೇವಾ ಸಂಕಲ್ಪ: ಅರಂತೋಡು ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳಾ ಮೋರ್ಚಾದಿಂದ ಗೌರವ

ಅರಂತೋಡು: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಸಮರ್ಪಣೆಯ ಹಿನ್ನೆಲೆ ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಅರಂತೋಡು ಶಕ್ತಿ ಕೇಂದ್ರದ ಅರಂತೋಡು ಅಂಗನವಾಡಿಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಲಾಯಿತು.ಅಂಗನವಾಡಿ ಶಿಕ್ಷಕಿ ಹೊನ್ನಮ್ಮ, ಸಹಾಯಕಿ ದೇವಕಿ ಹಾಗೂ ಆಶಾ ಕಾರ್ಯಕರ್ತೆ ತಿರುಮಲೇಶ್ವರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸುಳ್ಯ ಮಂಡಲ ಸಮಿತಿ ಹಾಗೂ ಮಹಿಳಾ ಮೋರ್ಚಾ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ಶಕ್ತಿ ಕೇಂದ್ರ ಪ್ರಮುಖ್ ಲೋಹಿತ್ ಕಲ್ಲುಗದ್ದೆ, ಮಹಿಳಾ ಮೋರ್ಚಾ ಸದಸ್ಯೆ ರಮ್ಯಾ ಪ್ರವೀಣ, ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ವಿಮಲಾ, ಮಾಜಿ ಪಂಚಾಯಿತಿ ಸದಸ್ಯೆ ಯಶೋದ ಹೂವಯ್ಯ, ಹಿರಿಯರಾದ ಗಂಗಮ್ಮ ಟೀಚರ್, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ರತ್ನಾವತಿ ಹರಿಶ್ಚಂದ್ರ ಸೇರಿದಂತೆ ಪ್ರವೀಣ್ ಎಲ್ಪಕಜೆ, ರೀನಾ ಶೇಖರ್, ಯು.ಕೆ. ಕಿಶೋರ್, ಚಂದ್ರಿಕಾ, ಹವ್ಯಾ, ಸುಹಾಸ್, ವೀಣಾ ಹಾಗೂ ಗ್ರಾಮದ ಕಾರ್ಯಕರ್ತರು, ಮಕ್ಕಳ ಪೋಷಕರು ಮತ್ತು ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು.











































Leave a Comment

Your email address will not be published. Required fields are marked *

error: Content is protected !!
Scroll to Top