88ನೇ ತಿಂಗಳಿಗೂ ಮುಂದುವರಿದ ಆರಂತೋಡು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ

ಆರಂತೋಡು, ಸೆ.27: ಆರಂತೋಡು ಗ್ರಾಮ ಪಂಚಾಯತ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನವು ನಿರಂತರ 88ನೇ ತಿಂಗಳಿಗೂ ಮುಂದುವರಿದಿದೆ.
ಸೆ.27ರಂದು ಭಾನುವಾರ ಸ್ಪಂದನಾ ಗೆಳೆಯರ ಬಳಗ (ರಿ.) ಅಡ್ತಲೆ, ಆರಂತೋಡು ಇದರ ಸಹಯೋಗದಲ್ಲಿ 88ನೇ ತಿಂಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಪರಿಸರ ಸ್ವಚ್ಛತೆ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಪಂದನಾ ಗೆಳೆಯರ ಬಳಗದ ಪದಾಧಿಕಾರಿಗಳು, ಆರಂತೋಡು ಗ್ರಾಮ ಪಂಚಾಯತ್‌ನಿಂದ ವರ್ಗಾವಣೆಗೊಂಡ ನಿರ್ಗಮಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸಿಬ್ಬಂದಿ, ನಿಕಟಪೂರ್ವ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್‌ನೊಂದಿಗೆ ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಸ್ವಚ್ಛತಾ ಸೇನಾನಿಗಳು ಭಾಗವಹಿಸಿದ್ದರು.
2018ರ ಡಿಸೆಂಬರ್‌ನಿಂದ ನಿರಂತರ ಸೇವೆ
ಆರಂತೋಡು ಗ್ರಾಮ ಪಂಚಾಯತ್ 2018ರ ಡಿಸೆಂಬರ್ ತಿಂಗಳಿನಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿತಿಂಗಳ ಕೊನೆಯ ಭಾನುವಾರದಂದು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ 88 ತಿಂಗಳ ನಿರಂತರ ಸ್ವಚ್ಛತಾ ಸೇವೆ ಪೂರ್ಣಗೊಂಡಿರುವುದು ವಿಶೇಷವಾಗಿದೆ.











































Leave a Comment

Your email address will not be published. Required fields are marked *

error: Content is protected !!
Scroll to Top