ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ: ಭರತನಾಟ್ಯ ಕಲಾ ಸೇವೆ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಪೂಜಾ ಮಹೋತ್ಸವ ಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯುತ್ತಿದೆ. ಅ.11ರಂದು ಆರಂಭಗೊಂಡಿರುವ ನವರಾತ್ರಿ ಪೂಜೆಯು ಅ.20ರವರೆಗೆ ನಡೆಯಲಿದ್ದು, ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯುತ್ತಿವೆ.
ಅ.14ರಂದು ಬೀದಿಗುಡ್ಡೆ ಸಂಪ್ಯಾಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಕು. ಸ್ತುತಿ ರೈ ಐಗಿರಿ ಅಡ್ಡಬೈಲು, ಕು. ಮನಸ್ವಿ ರೈ ಪಲ್ಲತ್ತಡ್ಕ ಹಾಗೂ ಕು. ಚರೀಷ್ಮ ರೈ ಪಲ್ಲೋಡಿ ಅವರಿಂದ ಭರತನಾಟ್ಯ ಕಲಾ ಸೇವೆ ನೆರವೇರಿತು. ಕು. ಸ್ತುತಿ ರೈ ಅವರು ಐಗಿರಿ ಅಡ್ಡಬೈಲಿನವರಾಗಿದ್ದು, ಕು. ಮನಸ್ವಿ ರೈ ಅವರು ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿ ಅವರ ಶಿಷ್ಯೆಯಾಗಿದ್ದಾರೆ. ಕು. ಚರೀಷ್ಮ ರೈ ಅವರು ವಿದುಷಿ ಪ್ರಾಂಜಲಿ ಕಾನತ್ತೂರು ಅವರ ಶಿಷ್ಯೆಯಾಗಿದ್ದಾರೆ.
ಕಲಾ ಸೇವೆಯ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಸಮಿತಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

















ಅ.15 ರಂದು ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ,ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಟರ್ (ರಿ) ಪುತ್ತೂರು ಇಲ್ಲಿಯ ವಿದ್ಯಾರ್ಥಿಗಳಾದ ಕು.ಆರಾಧನಾ ಬಾಬುಬೆಟ್ಟು ಹಾಗೂ ಕು. ಪ್ರಣತಿ ಜೋಗಿಬೆಟ್ಟು (ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈ ಹಾಗೂ ವಿದುಷಿ, ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಠೆಯರು).ಇವರಿಂದ “ಭರತನಾಟ್ಯ’ಕಲಾ ಸೇವೆನಡೆಯಲಿದೆ.

Leave a Comment

Your email address will not be published. Required fields are marked *

error: Content is protected !!
Scroll to Top