ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ,ಇಂದು ರಾತ್ರಿಯಿಂದಲೇ ಹೊಸ ದರ ಜಾರಿ

ಬೆಂಗಳೂರು: ಹಾಲು ಮೊಸರು ದರ ಹೆಚ್ಚಳ ನಡುವೆ ರಾಜ್ಯದ ಜನತೆಗೆ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಿದೆ. ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪರಿಷ್ಕೃತ ದರ ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಹಾಗೂ ನಿಗಮಗಳ ಆರ್ಥಿಕ ಚೇತರಿಕೆಯ ಉದ್ದೇಶದಿಂದ ಈ ದರ ಏರಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಭೈರತಿ ಸುರೇಶ್ ಅವರು, ಬಸ್ ಟಿಕೆಟ್ ದರ ಸಾಮಾನ್ಯ ಬಸ್ ಗಳಲ್ಲಿ ರೂ 9 ಮತ್ತು ವೇಗ ದೂತ ಬಸ್ಸುಗಳಿಗೆ ರೂ.18 ಹೆಚ್ಚಳ ಮಾಡಲಾಗಿದ್ದು, ಹೊಸ ದರ ರಾಜ್ಯಾದ್ಯಂತ ಇಂದಿನ ರಾತ್ರಿಯಿಂದಲೇ ಅನ್ವಯವಾಗಲಿದೆ ಎಂದು ಘೋಷಿಸಿದ್ದಾರೆ.



























Leave a Comment

Your email address will not be published. Required fields are marked *

error: Content is protected !!
Scroll to Top