ಹೊಸ ವಿನ್ಯಾಸದಲ್ಲಿ ಕಂಗೊಳಿಸಿದ ಸೆಲ್ ಹೌಸ್ ಮೊಬೈಲ್ಸ್: ಅರವಿಂದ ಬೋಳಾರ್ ಅವರಿಂದ ಉದ್ಘಾಟನೆ

ಸುಳ್ಯ: ನಗರದ ಮುಖ್ಯರಸ್ತೆಯ ದ್ವಾರಕ ಹೋಟೆಲ್ ಎದುರಿನ ಸೆಲ್ ಹೌಸ್ ಮೊಬೈಲ್ಸ್ ನವೀಕರಣಗೊಂಡು ಹೊಸ ವಿನ್ಯಾಸದೊಂದಿಗೆ ಗ್ರಾಹಕರ ಸೇವೆಗೆ ಮರುಚಾಲನೆಗೊಂಡಿದೆ. ನವೀಕೃತ ಮಳಿಗೆಯನ್ನು ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.



























ಉದ್ಘಾಟನೆಯ ಬಳಿಕ ಮಾತನಾಡಿದ ಅರವಿಂದ ಬೋಳಾರ್, ಗ್ರಾಹಕರಿಗೆ ನಗುಮುಖದ ಸೇವೆ ನೀಡುವ ಮೂಲಕ ಗುರುತಿಸಿಕೊಂಡಿರುವ ಸೆಲ್ ಹೌಸ್ ಮೊಬೈಲ್ಸ್ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ವ್ಯಾಪಕವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸುಳ್ಯದ ಜನತೆ ತಮ್ಮನ್ನು ಹಾಗೂ ತಮ್ಮ ಚಿತ್ರಗಳನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಲ್ಲಿನ ಅಭಿಮಾನಿಗಳು ನೀಡುತ್ತಿರುವ ಪ್ರೀತಿ ಮತ್ತು ಬೆಂಬಲವೇ ತಮ್ಮ ಬೆಳವಣಿಗೆಗೆ ಪ್ರೇರಣೆಯಾಗಿದೆ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಳಿಗೆಯ ಮೊದಲ ಗ್ರಾಹಕರಾದ ಸುಳ್ಯ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ಅವರಿಗೆ ಐಫೋನ್ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮಾಲಕ ಹಾರಿಸ್ ಮಂಡೆಕೋಲು ಅವರು ಅರವಿಂದ ಬೋಳಾರ್ ಸೇರಿದಂತೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಗ್ರಾಹಕರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top