ಪಂಜ: ಜೇಸಿಐ ಪಂಜ ಪಂಚಶ್ರೀಯ ವತಿಯಿಂದ ಡಿಸೆಂಬರ್ 6ರಿಂದ 10ರವರೆಗೆ ನಡೆಯಲಿರುವ ‘ಜೇಸಿ ಸಪ್ತಾಹ–2026’ರ ಆಮಂತ್ರಣ ಪತ್ರಿಕೆಗೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಜೆಸಿ ಜೆಎಫ್ಎಂ ದೇವಿಪ್ರಸಾದ್ ಚಿಕ್ಮುಳಿ ಹಾಗೂ ಕಾರ್ಯದರ್ಶಿ ಜೆಸಿ ಎಚ್ಜಿಎಫ್ ಪ್ರಕಾಶ್ ಅಳ್ಪೆ ಉಪಸ್ಥಿತರಿದ್ದರು.
ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನಗಳ ಪ್ರಾಧಿಕಾರದ ಅಧ್ಯಕ್ಷರಾದ ಭರತ್ ಮುಂಡೋಡಿ ಹಾಗೂ ‘ರಾಜ್ಯ ಸಹಕಾರಿ ರತ್ನ’ ಪುರಸ್ಕೃತರಾದ ಜಾಕೆ ಮಾಧವ ಗೌಡ ಅವರು ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ನ ಎಂ.ಜೆ.ಎಫ್. ಯಂ.ಬಿ. ಸದಾಶಿವ, ಡಾ. ದೇವಿಪ್ರಸಾದ್ ಕಾನತ್ತೂರ್, ಜೇಸಿಐ ಪಂಜ ಪಂಚಶ್ರೀಯ ಸ್ಥಾಪಕಾಧ್ಯಕ್ಷ ಜೆಸಿ ದೇವಿಪ್ರಸಾದ್ ಜಾಕೆ, ಘಟಕದ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೇಸಿ ಸಪ್ತಾಹದ ಆಮಂತ್ರಣ ಪತ್ರಿಕೆಗೆ ಪೂಜೆ









































