ಪೆರಾಜೆ:ಹೃದಯಾಘಾತದಿಂದ ಯುವಕ ನಿಧನ

ಅರಂತೋಡು : ಪೆರಾಜೆ ಗ್ರಾಮದ ಬಾಳೆಕಜೆ ನಿವಾಸಿ ಕೃಷ್ಣಪ್ಪ ಅವರ ಪುತ್ರ ಕರುಣೇಶ (37) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಕರುಣೇಶ ಅವರು ಏಕಾಏಕಿ ಜೋರಾಗಿ ಬೊಬ್ಬೆ ಹೊಡೆದರೆನ್ನಲಾಗಿದೆ. ತಕ್ಷಣ ಧಾವಿಸಿದ ತಾಯಿ ಅವರನ್ನು ಹಿಡಿದುಕೊಂಡಿದ್ದು, ಬಳಿಕ ಪಕ್ಕದ ಮನೆಯಲ್ಲಿದ್ದ ಸಂಬಂಧಿಕರನ್ನು ಕರೆಸಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಕರುಣೇಶ ಅವರನ್ನು ತಕ್ಷಣ ಸುಳ್ಯ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಕರುಣೇಶ ಅವರು ಕೆಲ ಸಮಯದಿಂದ ಸುಳ್ಯದ ಆಯುರ್ವೇದ ಕಾಲೇಜಿನಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಹರ್ಷಿತಾ, ತಾಯಿ ಭವಾನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.











































































Leave a Comment

Your email address will not be published. Required fields are marked *

error: Content is protected !!
Scroll to Top