ಮೂಕ ಅಯ್ಯಪ್ಪ ಭಕ್ತನಿಗೊಳಿದ ಶಬರಿಮಲೆ ಅಯ್ಯಪ್ಪ,ಮಾತನಾಡಲು ಬಾರದ ಮೂಕ ಸ್ವಾಮಿ ಎಂಟು ಬಾರಿ ಶರಣು ಕರೆದ

ಅಯ್ಯಪ್ಪನ ಮಹಿಮೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ
ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.ಒಂದು ಶಬ್ದ ಮಾತನಾಡಲೂ ಬಾಯಿ ಬಾರದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ, ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಮಾತನಾಡಲು ಆರಂಭಿಸಿದ್ದಾನೆ.ಪುತ್ತೂರಿನ
ಸಾಮೆತ್ತಡ್ಕ ನಿವಾಸಿಯಾದ ಪ್ರಸನ್ನ ಎನ್ನುವವರು ಮಾತನಾಡುವ ಮೂಲಕ ಜನರ ಅಚ್ಚರಿಗೆ ಕಾರಣವಾಗಿದೆ.ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ



































































































ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕ
ಮಾತನಾಡಲು ಪ್ರಾರಂಭಿಸಿದ್ದಾರೆ.ಒಂದಕ್ಷರ ಸರಿಯಾಗಿ ಮಾತನಾಡದ ಪುತ್ತೂರು ನಿವಾಸಿ ಪ್ರಸನ್ನ ಎನ್ನುವ ಬಾಲಕ
ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು
ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದ.
ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ
ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದಿದ್ದ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ.ಒಂದು ಶಬ್ದ ಮಾತನಾಡಲೂ ಒಂದು ವರ್ಷಗಳ ಹಿಂದೆ ಚಡಪಡಿಸುತ್ತಿದ್ದ ಈ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಎನ್ನುತ್ತಾರೆ. ಮಾತು ಬಾಯಿಯಿಂದ ಬರುತ್ತಿದ್ದು ಎಂಟು ಶರಣುವನ್ನು ಪ್ರಸನ್ನ ಯಾವುದೇ ತೊಂದರೆಯಿಲ್ಲದೆ ಕರೆಯುತ್ತಾರೆ. ನಂತರ ಮಾತನಾಡುವ ಶಬ್ದಗಳಲ್ಲಿ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ,
ಅರ್ಥವಾಗುವಂತಿದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ
ಮಲೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಮಲೆ ಏರಿದರೆ
ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ
ಎನ್ನುವ ನಿರೀಕ್ಷೆಯಲ್ಲಿ ಹಿರಿಯ ಸ್ವಾಮಿಗಳಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top